Cinema News
ವಿನಯ್ ರಾಜ್‌ಕುಮಾರ್ ಸಿನಿಮಾಗೆ ರವಿ ಬಸ್ರೂರ್ ಡೈರೆಕ್ಟರ್
ಕೆಜಿಎಫ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರ್ ವಿನಯ್ ರಾಜ್‌ಕುಮಾರ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ.
ಈಗಾಗಲೇ ಅವರು ಮೂರ್ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಸದ್ಯ ಗಿರ್ಮಿಟ್ ಸಿನಿಮಾದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಜತೆಗೆ ಕೆಜಿಎಫ್ 2 ಸಿನಿಮಾಗಾಗಿ ಅವರು ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಇದರ ಜತೆ ಜತೆಯಲ್ಲಿ ವಿನಯ್ ರಾಜ್‌ಕುಮಾರ್ ಸಿನಿಮಾಗೂ ಅವರು ಸ್ಕ್ರಿಪ್ಟ್ ಬರೆದಿದ್ದಾರೆ. ಇದುವರೆಗೂ ವಿನಯ್ ರಾಜ್‌ಕುಮಾರ್ ಕಾಣದ ಲುಕ್‌ನ್ನು ಈ ಸಿನಿಮಾಗಾಗಿ ಅವರು ಮಾಡಲಿದ್ದಾರಂತೆ.
ವಿನಯ್ ರಾಜ್‌ಕುಮಾರ್ ಸದ್ಯ ಕರಮ್ ಚಾವ್ಲಾ ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದು, ಅದಾದ ಮೇಲೆ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೋಳ್ಳಲಿದ್ದಾರೆ. ವಿನಯ್ ಮತ್ತು ರವಿ ಬಸ್ರೂರು ಕಾಂಬಿನೇಶನ್‌ನ ಸಿನಿಮಾವನ್ನು ಎನ್ ಎಸ್ ರಾಜ್‌ಕುಮಾರ್ ನಿರ್ಮಾಣ ಮಾಡಲಿದ್ದಾರೆ.