Cinema News

ರಶ್ಮಿಕಾ ಇದೀಗ ಬಿಟೌನ್ ನ ಮತ್ತೊಬ್ಬ ಸ್ಟಾರ್ ನಟನಿಗೆ ಜೋಡಿಯಾಗೋಕೆ ರೆಡಿಯಾಗಿದ್ದಾರೆ.

Published

on

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ಖ್ಯಾತಿ ಘಳಿಸಿರೋ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಕೈತುಂಬಾ ಸಿನಿಮಾಗಳನ್ನ ಹಿಡಿದುಕೊಂಡಿರೋ ರಶ್ಮಿಕಾ ಇದೀಗ ಬಿಟೌನ್ ನ ಮತ್ತೊಬ್ಬ ಸ್ಟಾರ್ ನಟನಿಗೆ ಜೋಡಿಯಾಗೋಕೆ ರೆಡಿಯಾಗಿದ್ದಾರೆ.

ರಶ್ಮಿಕಾ ಬತ್ತಳಿಕೆಯಲ್ಲಿ ಈಗಾಗ್ಲೆ ಸಾಕಷ್ಟು ಸಿನಿಮಾಗಳಿವೆ. ಬಾಲಿವುಡ್ ನಲ್ಲಿ ನಟಿಸಿರೋ ಸಿನಿಮಾಗಳೇ ಇನ್ನೂ ತೆರೆಗೆ ಬಂದಿಲ್ಲ. ಈ ಮಧ್ಯೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಕಿರಿಕ್ ಬೆಡಗಿ ಇದೀಗ ಟೈಗರ್ ಶ್ರಾಫ್ ಗೆ ಜೋಡಿಯಾಗೋಕೆ ಮುಂದಾಗಿದ್ದಾರೆ.

ಧರ್ಮ ಪ್ರೋಡಕ್ಷನ್ಸ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಟೈಗರ್ ಶ್ರಾಫ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಜೊತೆಗೆ ಪ್ರೇಮ ಕಥೆಯನ್ನ ತೋರಿಸೋಕೆ ಬರಹಗಾರ ಮತ್ತು ನಿರ್ದೇಶಕ ಶಶಾಂಕ್ ಖೈತಾನ್ ರೆಡಿಯಾಗಿದ್ದಾರೆ.
ರಶ್ಮಿಕಾ ಹಾಗೂ ಟೈಗರ್ ಶ್ರಾಫ್ ಜೋಡಿಯನ್ನು ತೆರೆ ಮೇಲೆ ನೋಡೋಕೆ ಅಭಿಮಾನಿಗಳು ರೆಡಿಯಾಗಿದ್ದು ಈ ಜೋಡಿ ಮೋಡಿ ಮಾಡುತ್ತಾ ಅನ್ನೋದು ಸಿನಿಮಾ ತೆರೆಗೆ ಬಂದ ಮೇಲೆ ಗೊತ್ತಾಗುತ್ತೆ.

Spread the love
Click to comment

Copyright © 2019 PopcornKannada.com