Cinema News
ಸ್ವಾತಂತ್ರ್ಯ ದಿನಾಚರಣೆಗೆ “ರಾಂಧವ”
ಬಿಗ್‌ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕರಾಗಿರುವ ರಾಂಧವ ಸಿನಿಮಾ ಇದೇ ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ರೈತರಿಂದ ಆಡಿಯೋ ಬಿಡುಗಡೆ ಮಾಡಿಸಿದ ಚಿತ್ರತಂಡ ಸಿನಿಮಾವನ್ನು ಬಿಡುಗಡೆ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಯುವ ನಿರ್ದೇಶಕ ಸುನೀಲ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಐತಿಹಾಸಿಕ ಕಥೆಯೂ ಇದ್ದು, ನಾಯಕ ಭುವನ್ ರಾಜನ ಪಾತ್ರವನ್ನು ಹಾಕಿದ್ದಾರೆ. ಈ ಚಿತ್ರದಲ್ಲಿ ಅವರು ಮೂರು ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಶ್ರೀನಿವಾಸ್ ನಾಯಕಿಯಾಗಿದ್ದಾರೆ.
ಆಗಸ್ಟ್‌ನಲ್ಲಿ ಸಾಕಷ್ಟು ಸಿನಿಮಾಗಳಿದ್ದೂ, ರಾಂಧವಕ್ಕೆ 200 ಚಿತ್ರಮಂದಿರಗಳು ಸಿಕ್ಕಿವೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್‌ಗೆ ಆಡಿಯನ್ಸ್ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ ನಟ ಭುವನ್.
ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ರಾಂಧವ ಚಿತ್ರಮಂದಿರದಲ್ಲಿ ಕತ್ತಿ ಹಿಡಿದು ಆರ್ಭಟಿಸುವುದು ಪಕ್ಕಾ ಆಗಿದೆ.