Cinema News

ಟ್ರೈಲರ್ ನಲ್ಲಿ ಮೋಡಿ ಮಾಡಿದ ರಣಬೀರ್ ಕಪೂರ್: ಬ್ರಹ್ಮಾಸ್ತ್ರ ನೋಡಿ ಶಾಕ್ ಆದ ಬಿಟೌನ್

Published

on

‘ಬ್ರಹ್ಮಾಸ್ತ್ರ’ ಟ್ರೈಲರ್ ಔಟ್: ಶಿವನ ಪಾತ್ರದಲ್ಲಿ ಮೋಡಿ ಮಾಡಿದ ರಣಬೀರ್ ಕಪೂರ್
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬಹು ನಿರೀಕ್ಷಿತ ‘ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಣಬೀರ್ `ಕಪೂರ್, ಅಮಿತಾಭ್ ಬಚ್ಚನ್, ಆಲಿಯಾ ಭಟ್, ನಾಗಾರ್ಜುನ ಮತ್ತು ಮೌನಿ ರಾಯ್ ನಟನೆಯ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಚಿತ್ರದ ಮೊದಲ ಅಧಿಕೃತ ಟ್ರೇಲರ್ ಸ್ಟಾರ್ ಸ್ಡುಡಿಯೋದಲ್ಲಿ ಬಿಡುಗಡೆ ಆಗಿದೆ.
ಟ್ರೈಲರ್ ಬಿಡುಗಡೆಯಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಆಗಿದ್ದು, ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಶಿವನ ಕಥೆಯನ್ನು ಆಧರಿಸಿದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಕಫೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನು ಇಶಾಳನ್ನು ಪ್ರೀತಿಸುತ್ತಿದ್ದು, ಇಶಾ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ.

ಟ್ರೈಲರ್ ಬಿಡುಗಡೆ ಕುರಿತು ಸ್ಟಾರ್ ಸ್ಟುಡಿಯೋ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ‘ಹಿಂದೆದೂ ನೋಡಿರದ ಜಗತ್ತನ್ನು ಪ್ರವೇಶಿಸಲು ಸಿದ್ದರಾಗಿ‘ ಎಂದು ಬರೆದುಕೊಂಡಿದೆ. ಚಿತ್ರವು 2022 ಸಪ್ಟೆಂಬರ್ 9ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

Spread the love
Click to comment

Copyright © 2019 PopcornKannada.com