Cinema News

ಪಿ.ಆರ್.ಕೆ ಆಡಿಯೋದಲ್ಲಿ ಬಿಡುಗಡೆಯಾದ ‘ರಕ್ಕಿ’ ಟ್ರೇಲರ್; ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ಶುಭ ಹಾರೈಕೆ

Published

on

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದದೊಂದಿಗೆ ನಿರ್ಮಾಣವಾಗಿರುವ ‘ರಕ್ಕಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಎಸ್ ಎನ್ ಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಾಲಿಗ್ರಾಮ ಸುರೇಶ್ ನಿರ್ಮಿಸಿರುವ ಈ ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

 

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ನಿರ್ಮಾಪಕ ಸಾಲಿಗ್ರಾಮ ಸುರೇಶ್ ಅವರೊಂದಿಗೆ ಹಲವು ವರ್ಷಗಳ ಸ್ನೇಹವಿದ್ದು, ಅವರ ಸಹಕಾರದಿಂದ ಈ ಸಿನಿಮಾ ಆರಂಭವಾಯಿತು ಎಂದು ಹೇಳಿದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಮುಹೂರ್ತದಿಂದಲೂ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು. ‘ರಕ್ಕಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ದೊರೆತಿದ್ದು, ಜುಲೈ 10ರಂದು ತೆರೆಗೆ ಬರಲಿದೆ ಎಂದರು.

 

 

 

 

 

ಚಿತ್ರದ ನಾಯಕ ರಕ್ಕಿ ಮಾತನಾಡಿ, ಇದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಚಿತ್ರದಲ್ಲಿ ತಾನು ಸ್ಟೈಲಿಶ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ಜರ್ಮನಿಯಲ್ಲಿ ತಯಾರಿ ಮಾಡಿಕೊಂಡು ಬಂದು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದು, ಇದು ತಮ್ಮ ಚೊಚ್ಚಲ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ಪ್ರೋತ್ಸಾಹ ಕೋರಿದರು.

 

 

 

 

 

ನಿರ್ಮಾಪಕ ಸಾಲಿಗ್ರಾಮ ಸುರೇಶ್ ಮಾತನಾಡಿ, ತಾವು ಜರ್ಮನಿಯಲ್ಲಿ ನೆಲೆಸಿದ್ದು, ತಮ್ಮ ಕುಟುಂಬಕ್ಕೆ ಚಿತ್ರರಂಗದ ನಂಟಿದೆ ಎಂದು ಹೇಳಿದರು. ತಮ್ಮ ತಂದೆ ರಾಜಶೇಖರ್ ಅವರು ಡಾ.ರಾಜ್‌ಕುಮಾರ್ ಅಭಿನಯದ ‘ಹೊಸಬೆಳಕು’ ಚಿತ್ರ ನಿರ್ಮಾಣ ಮಾಡಿದ್ದರು. ಇದೀಗ ತಮ್ಮ ಮಗ ರಕ್ಕಿಯನ್ನು ನಾಯಕನಾಗಿ ಪರಿಚಯಿಸುತ್ತಿರುವುದು ಸಂತಸದ ವಿಚಾರ ಎಂದರು. ಚಿತ್ರದಲ್ಲಿ ಬಿ.ಸುರೇಶ್, ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್ ಸೇರಿದಂತೆ ಹಲವರು ನಟಿಸಿದ್ದು, ಸಂಗೀತ, ಛಾಯಾಗ್ರಹಣ ಹಾಗೂ ತಾಂತ್ರಿಕ ವಿಭಾಗದಲ್ಲಿ ಉತ್ತಮ ತಂಡ ಕೆಲಸ ಮಾಡಿದೆ.

Spread the love

Copyright © 2019 PopcornKannada.com