Cinema News

ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಗಂಧರ್ವ”ನ ಫಸ್ಟ್‌ ಲುಕ್‌.

Published

on

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಉಮೇಶ್ ಕುಮಾರ್ ಜಿ ಪ್ರಥಮ ನಿರ್ದೇಶನದ “ಗಂಧರ್ವ” ಚಿತ್ರದ ಫಸ್ಟ್ ಲುಕನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಕೂಡ ರಾಘಣ್ಣ ಅಭಿನಯಿಸುತ್ತಿದ್ದಾರೆ. ಆದರೆ ನಮ್ಮ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರನ್ನು ಈಗಿರುವ ರೀತಿ ತೋರಿಸಲ್ಲ. ಹಿಂದೆ ರಾಘಣ್ಣ ಹೇಗಿದ್ದರೊ ಹಾಗೆ ನೋಡಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

 

 

 

 

 

ಗೋವಿಂದ್ ರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕನಾಗಿ ಇವರಿಗೆ ಇದು ಮೊದಲ ಚಿತ್ರ.‌ ಹಿಂದೆ ಶಿವಾಜಿ ಸುರತ್ಕಲ್ ಚಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಸುಕನ್ಯ ಗಿರೀಶ್ ಈ ಚಿತ್ರದ ನಾಯಕಿ. ನಾಗೇಂದ್ರ ಅರಸ್, ಲಕ್ಷ್ಮೀ ಸುಬ್ಬಯ್ಯ, ಕಿರಣ್ ಚಂದ್ರ, ಶಿವರಾಜ್ ಮುತ್ತಣ್ಣ, ಶರಣ್, ಹಿತ್ತೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎನ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರೆಡ್ಡಿ ಎನ್ ರಾಥೋಡ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರೋನಾಡ್ ಬಕೇಶ್ ಸಂಗೀತ ನಿರ್ದೇಶನ, ನವೀನ್ ಸೂರ್ಯ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಸಂಕಲನ ಈ ಚಿತ್ರಕ್ಕಿದೆ.
ಸ್ನೇಹದ ಮಹತ್ವ ಸಾರುವ ಹಾಗೂ ಡಿಫರೆಂಟ್ ಲವ್ ಸ್ಟೋರಿಯ ಈ ಚಿತ್ರಕ್ಕೆ ಏಪ್ರಿಲ್ ನಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ದಾಂಡೇಲಿ, ಹಂಪಿ, ಹೊಸಪೇಟೆ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

Spread the love

Copyright © 2019 PopcornKannada.com