Cinema News
ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಯಶ್
ಸ್ಯಾಂಡಲ್‌ವುಡ್ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಎಂದೇ ಕರೆಸಿಕೊಳ್ಳುವ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವಿಗೆ ‘ಐರಾ’ ಎಂದು ನಾಮಕರಣ ಮಾಡಿದ್ದಾರೆ. ಅದು ಮುಗಿದು ಮೂರೇ ದಿನಕ್ಕೆ ಯಶ್ ತಾನು ಎರಡನೇ ಮಗುವಿಗೆ ತಂದೆಯಾಗುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಹೌದು, ಮೊದಲ ಮಗು ಆಗಿ ಕೆಲವೇ ತಿಂಗಳಿನಲ್ಲಿ ಯಶ್ ಮತ್ತು ರಾಧಿಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಅವರು ತಮ್ಮ ಪುತ್ರಿಯ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಐರಾ ಅವರ ಫೋಟೋಗಳನ್ನು ಬಳಸಿ ಒಂದು ಫನ್ನಿ ವೀಡಿಯೋ ಮಾಡುವ ಮೂಲಕ ವಿಭಿನ್ನವಾಗಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ ಯಶ್ ಮತ್ತು ರಾಧಿಕಾ.