Cinema News

ಸೆನ್ಸಾರ್ ಅಂಗಳದಲ್ಲಿ ಪುರುಷೋತ್ತಮ

Published

on

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ರವಿ ಪ್ರಥಮಬಾರಿ ನಾಯಕನಾಗಿ ಮತ್ತು ರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ, ವಿಜಯ್‌ರಾಮೆಗೌಡ ಭೂಕನಕೆರೆ ಪ್ರಸೆಂಟ್ ಮಾಡುತ್ತಿರುವ ’ಪುರುಷೋತ್ತಮ’ ಸಿನಿಮಾವು ಸೆನ್ಸಾರ್ ಅಂಗಳಕ್ಕೆ ಹೋಗಲು ಸಜ್ಜಾಗಿದೆ. ’ದಿಲ್ದಾರ’ ಮತ್ತು ’ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ’ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕತೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಾರಂಭದಿಂದಲೂ ಸುದ್ದಿ ಮಾಡುತ್ತಾ, ಸದ್ದು ಮಾಡುತ್ತಿರುವ ಪುರುಷೋತ್ತಮನಿಗೆ ಪ್ರಶಂಸೆಗಳು ಬರುತ್ತಿವೆ. ನಾಲ್ಕು ಗೀತೆಗಳ ಪೈಕಿ ಮೂರು ಹಾಡುಗಳು ಹಿಟ್ ಆಗಿದೆ. ಅದರಲ್ಲೂ ’ಸಂಸಾರ ಅದ್ಮಂಲೇ’ ಹಾಡು ಯೂಟ್ಯೂಬ್‌ದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ರವಿರವರು ಅಯ್ಕೆ ಮಾಡಿಕೊಂಡಿರುವ ಕತೆಯಲ್ಲಿ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಹೇಳಿರುವುದು ಪ್ಲಸ್ ಪಾಯಿಂಟ್ ಆಗಿದೆ. ಚಿತ್ರಕತೆಯು ಕುತೂಹಲ ಹೊಂದಿರುವ ಮತ್ತು ಸಾಂಸಾರಿಕ ಕುಟುಂಬದಲ್ಲಿ ಪತ್ನಿಯನ್ನು ಹೇಗೆ ಪ್ರೀತಿಸಬೇಕೆಂಬುದನ್ನು ತೋರಿಸಲಾಗಿದೆ.

ನಟನೆ, ಲೋಕೇಶನ್ ಬಗ್ಗೆ ಎಲ್ಲೂ ರಾಜಿಯಾಗದೆ, ನಿರ್ದೇಶಕರ ಮುಂದೆ ವಿದ್ಯಾರ್ಥಿಯಂತೆ ನಟನೆ ಮಾಡಿದ್ದಾರೆಂದು ಸಿನಿಪಂಡಿತರು ಹೇಳಿದ್ದಾರೆ. ರಷಸ್ ನೋಡಿದ ಪರಭಾಷಿಗಳು ತೆಲುಗು, ತಮಿಳು ಭಾಷೆಗೆ ಡಬ್ ಮಾಡಲು ಬೇಡಿಕೆ ಇಟ್ಟಿದ್ದಾರೆ. ಆದರೆ ಮೊದಲ ಪ್ರತಿ ಹೊರಬಂದ ನಂತರ ತಿಳಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಇಷ್ಟೆಲ್ಲಾ ಸಕರಾತ್ಮಕ ಮಾಹಿತಿ ಹೊಂದಿರುವ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್ ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಕುಮಾರ್.ಎಂ, ಸಂಕಲನ ಅರ್ಜುನ್ ಕಿಟ್ಟು, ನೃತ್ಯ ಕಲೈ, ಎಫೆಕ್ಟ್ಸ್ ರಾಜನ್, ಸಿಜೆ ಅಕ್ಷಯ್, ವಿಎಫ್‌ಎಕ್ಸ್ ಕಾರ್ತಿಕ್ ಅವರದಾಗಿದೆ. ಜನವರಿ ತಿಂಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.

Spread the love
Click to comment

Copyright © 2019 PopcornKannada.com