Cinema News

ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ನೀಡಿದ ನಿರ್ಮಾಪಕ

Published

on

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಬಳಿಕ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈಗಾಗ್ಲೆ ಸಾಕಷ್ಟು ವಿಷಯಗಳು ಹರಿದಾಡುತ್ತಿದ್ದು ಯಶ್ ಮಾತ್ರ ಯಾವುದಕ್ಕೂ ತುಟ್ಟಿ ಎರಡು ಮಾಡುತ್ತಿಲ್ಲ. ಯಶ್ ಮುಂದಿನ ಸಿನಿಮಾ ಮಫ್ತಿ ಚಿತ್ರದ ನಿರ್ದೇಶಕನ ಜೊತೆ ಮಾಡುತ್ತಾರೆ ಅನ್ನೋ ಮಾಹಿತಿ ಇದ್ದರು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಈ ಮಧ್ಯೆ ಯಶ್ ಕುರಿತಾದ ಮತ್ತೊಂದು ಇಂಟ್ರೆಸ್ಟಿಂಗ್ ಮಾಹಿತಿ ಹೊರ ಬಿದ್ದಿದೆ.
ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ, ಬಹುಕೋಟಿ ಬಜೆಟ್ ಸಿನಿಮಾ ಮಾಡುವ ದಿಲ್ ರಾಜು ಅವರು ರಾಕಿಂಗ್ ಸ್ಟಾರ್ ಯಶ್ ಗಾಗಿ ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾವನ್ನು ತೆಲುಗು ನಿರ್ದೇಶಕರೇ ನಿರ್ದೇಶನ ಮಾಡುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದೆಯಂತೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಯಶ್ ಅವರಿಗೆ ದಿಲ್ ರಾಜು 100 ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದಾರಂತೆ ಎಂಬ ಸುದ್ದಿ ಹರಿದಾಡ್ತಿದೆ.
ಈ ಹಿಂದೆಯೂ ಕೂಡ ಯಶ್ ಅವರು ನೂರಾರು ಕೋಟಿ ರೂಪಾಯಿಯ ಬಾಲಿವುಡ್ ಆಫರ್ ತಿರಸ್ಕರಿಸಿದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಪ್ರಮಾಣದ ಸಿನಿಮಾವನ್ನು ಅವರು ಬಿಡಲು ಕಾರಣ ಏನು? ಎಂಬ ಪ್ರಶ್ನೆ ಕೂಡ ಮೂಡಿತ್ತು. ಈಗ ಮತ್ತೆ ನೂರು ಕೋಟಿ ರೂಪಾಯಿ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಅಂದುಕಂಡಂತೆ ಆದರೆ, ದಕ್ಷಿಣದಲ್ಲೇ ಈ ಪ್ರಮಾಣದಲ್ಲಿ ಸಂಭಾವನೆ ಪಡೆಯುವ ಬೆರಳಣಿಕೆಯ ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ. ಆದರೆ, ನರ್ತನ್ ಸಿನಿಮಾ ಕಂಪ್ಲೀಟ್ ಆದ ಬಳಿಕವೇ ಯಶ್ ದಿಲ್ ರಾಜು ಸಿನಿಮಾಲ್ಲಿ ಭಾಗಿಯಾಲಿದ್ದಾರಂತೆ.

Spread the love

Copyright © 2019 PopcornKannada.com