Cinema News
ಪ್ರಿಯಾಂಕ ಒಳ್ಳೆಯ ಕಲಾವಿದೆ. ಅವರಿಂದ ಕಲಿಯುವುದು ಸಾಕಷ್ಟಿದೆ – ಉಪೇಂದ್ರ
ನವೆಂಬರ್ 12 ಆಕ್ಷನ್ ಕ್ವೀನ್ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ, ಅವರ ಅಭಿನಯದ ’ಲೈಫ್ ಈಸ್ ಬ್ಯುಟಿಫುಲ್’ ಚಿತ್ರತಂಡದವರು ಅರ್ಥಪೂರ್ಣವಾಗಿ ಬರ್ತ್‌ಡೇ ಸಂಭ್ರಮವನ್ನು ಆಚರಿಸಿದರು. ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ ಸಿನಿಮಾದ ತುಣುಕುಗಳನ್ನು ನೋಡಿದ್ದೇನೆ. ಚೆನ್ನಾಗಿ ಬಂದಿದೆ. ಲಿಫ್ಟ್ ಮೇಲೆ ಕೆಳಗೆ ಹೋಗುತ್ತಿರುತ್ತದೆ.
ಅದೇ ರೀತಿ ನಮ್ಮ ಜೀವನ ಕೂಡ ಹಾಗೇ ಇರುತ್ತದೆ. ಒಮ್ಮೆ ಮೇಲೆ, ಕೆಳಗೆ. ಹಾಗಾಗಿಯೇ ಇದಕ್ಕೆ ಈ ಟೈಟಲ್ ಇಟ್ಟಿದ್ದಾರೆ ಅನಿಸುತ್ತದೆ. ಪೃಥ್ವಿಅಂಬರ್ ’ದಿಯಾ’ದಲ್ಲಿ ನಟನೆ ಸೂಪರ್. ಅವರಿಗೆ ಭವಿಷ್ಯವಿದೆ. ಪ್ರಿಯಾಂಕ ಹೊರಗಡೆ ಚೆನ್ನಾಗಿ ಮಾತನಾಡಿ, ಒಳ್ಳೆಯ ವಾತಾವರಣ ಉಂಟು ಮಾಡಿದ್ದಾರೆ. ಆದರೆ ಮನೇಲಿ ಬೈಯುತ್ತಾರೆ. ಆಕೆ ಅದ್ಬುತ ಕಲಾವಿದೆ. ಅವರಿಂದ ನಾನು ಇನ್ನು ಸಾಕಷ್ಟು ಕಲಿಯುವುದಿದೆ ಎಂದು ನಗಿಸುತ್ತಲೇ ಪ್ರಿಯಾಂಕ ಉಪೇಂದ್ರ ಕಾಲೆಳೆದು, ’ಯುಐ’ ಬಿಡುಗಡೆಯಾಗುವ ತನಕ ಪತ್ನಿಗೆ ಉಡುಗೊರೆ ಇಲ್ಲವೆಂದು ಮಾಧ್ಯಮದ ಪ್ರಶ್ನೆಗೆ ಉತ್ತರವಾದರು.
ಶೂಟಿಂಗ್ ಮೊದಲೇ ಸ್ಕ್ರಿಪ್ಟ್ ರೀಡಿಂಗ್, ವರ್ಕ್‌ಶಾಪ್ ಮಾಡಿ ತುಂಬಾ ಪರ್ಫೆಕ್ಟ್ ಆಗಿ ಕೆಲಸ ಮಾಡಿಸಿದ್ದಾರೆ. ಡಿಸೆಂಬರ್ 14 ನಮ್ಮ ಮದುವೆ ವಾರ್ಷಿಕೋತ್ಸವ ಇದೆ. ಆ ಸಂಭ್ರಮಕ್ಕೆ ಮುನ್ನದಿನ ಚಿತ್ರ ತೆರೆ ಕಾಣುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬನ್ನಿರೆಂದು ಪ್ರಿಯಾಂಕಉಪೇಂದ್ರ ಕೋರಿದರು.
’ದಿಯಾ’ ಆದಮೇಲೆ ಬಂದ ಅವಕಾಶ ಇದಾಗಿದೆ. ಮೇಡಂ ನನ್ನ ಜತೆಗೆ ಅಭಿನಯಿಸುತ್ತಾರೆಂದು ತಿಳಿದು ಭಯ ಆಗಿತ್ತು. ಆದರೆ ಅವರು ಮೊದಲ ದಿನದಂದೇ ಅದನ್ನು ಹೋಗಲಾಡಿಸಿದರು. ನಮ್ಮ ಸಿನಿಮಾಕ್ಕೆ ಹರಸಲು ಉಪೇಂದ್ರ ಬಂದಿದ್ದಾರೆ. ಇದಕ್ಕಿಂತ ಭಾಗ್ಯ ಇನ್ನೇನು ಬೇಕು. ಮೇಡಂ ಹುಟ್ಟುಹಬ್ಬದಂದೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವುದು ಸಂತಸವಾಗಿದೆ ಎಂದರು ಪೃಥ್ವಿಅಂಬರ್.
ತಾರಾಗಣದಲ್ಲಿ ಲಾಸ್ಯನಾಗರಾಜ್, ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಾಂತೇಶ್ ಮುಂತಾದವರು ನಟಿಸಿದ್ದಾರೆ. ಸಂಗೀತ ನೊಬಿನ್‌ಪೌಲ್ ಅವರದಾಗಿದೆ. ಸಾಬು ಅಲೋಶಿಯಸ್ ಮತ್ತು ಅರುಣ್‌ಕುಮಾರ್.ಎಂ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಬಿಜಿ ಅರುಣ್, ಕಿಶೋರ್ ನರಸಿಂಹಯ್ಯ, ಪುನೀತ್.ಹೆಚ್ ಮತ್ತು ಜೊನಾತನ್ ಅಗಸ್ಟಿನ್ ಬಂಡವಾಳ ಹೂಡಿದ್ದಾರೆ.