Television News

ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಶ್ರೀಧರ್, ಉಪಾಧ್ಯಕ್ಷರಾಗಿ ಆನಂದ್ ಬೈದನಮನೆ ನೇಮಕ

Published

on

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀಧರ್ ನೇಮಕವಾಗಿದ್ದಾರೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಧರ್ , ಉಪಾಧ್ಯಕ್ಷರಾಗಿ ಆನಂದ್ ಬೈದನಮನೆ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ, ಕಾರ್ಯದರ್ಶಿಯಾಗಿ ದೊಡ್ಡ ಬೊಮ್ಮಯ್ಯ, ಸಹಕಾರ್ಯದರ್ಶಿಯಾಗಿ ಮಹಾಂತೇಶ್, ಹಾಗೂ ಖಜಾಂಚಿಯಾಗಿ ಮೋಹನ್ ನೇಮಕವಾಗಿದ್ದಾರೆ.
ಪ್ರೆಸ್ ಕ್ಲಬ್ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಜಿ.ಗಣೇಶ್, ಆಲ್ಫ್ರೆಡ್, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯೆರಾಗಿ ರೋಹಿಣಿ ಹಾಗೂ ಮಿನಿ ತೇಜಸ್ವಿ ಅವರು ಗೆಲುವಿನ ನಗೆ ಬೀರಿದ್ದಾರೆ.
ಅಧ್ಯಕ್ಷರಾದ ಶ್ರೀಧರ್ ಅವರಿಗೆ 302 ಮತ ಪಡೆದರೆ, ಕಮಿಟಿ ಸದಸ್ಯೆ ರೋಹಿಣಿಯವರಿಗೆ ಅತಿ ಹೆಚ್ಚು 307 ಮತ ಪಡೆದಿದ್ದಾರೆ. ಎರಡನೇ ಅತಿ ಹೆಚ್ಚು ಸ್ಥಾನ ಅಂದರೆ 186 ಮತಗಳನ್ನ ಗಣೇಶ್ ಅವರು ಪಡೆದಿದ್ದಾರೆ.

Spread the love
Click to comment

Copyright © 2019 PopcornKannada.com