Cinema News

ಟ್ರೇಲರ್ ನಲ್ಲೇ ಗಮನ ಸೆಳೆದ “ಪ್ರೇಮಿ” ಏಪ್ರಿಲ್ 3 ರಂದು ಚಿತ್ರಮಂದಿರಗಳತ್ತ . .

Published

on

ಶ್ರೀ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಸಿದ್ದಲಿಂಗಯ್ಯ ಅವರು ನಿರ್ಮಿಸಿರುವ ಹಾಗೂ ಎಸ್ ಪ್ರದೀಪ್ ವರ್ಮ ಅವರು ನಿರ್ದೇಶಿಸಿರುವ ಹಾಗೂ ಅದ್ವಿಕ್ ನಾಯಕನಾಗಿ ನಟಿಸಿರುವ “ಪ್ರೇಮಿ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕ ಭಾ.ಮ.ಹರೀಶ್, ನಿರ್ದೇಶಕ ಸತ್ಯ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರು ಮತ್ತು ನೃತ್ಯ ನಿರ್ದೇಶಕ ಟಗರು ರಾಜು ಮಾಸ್ಟರ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. A2 music ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ “ಪ್ರೇಮಿ” ಚಿತ್ರದ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಏಪ್ರಿಲ್ 3 ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

 

 

 

 

ಸಂಗೀತ ನಿರ್ದೇಶಕನಾಗಿ ಈ ಚಿತ್ರಕ್ಕೆ ಬಂದ ನಾನು ನಂತರ ನಿರ್ದೇಶಕನಾದೆ. ನಾಯಕ ಅದ್ವಿಕ್ ಅವರ ತಾಯಿ ಅಕ್ಕಮಹಾದೇವಿ ಅವರು ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ ಬರೆದಿದ್ದೇನೆ. 90 ರ ದಶಕದ ಪ್ರೇಮಕಥೆ ಇದು. 80 – 90ರ ಪ್ರೀತಿಯೇ ಬೇರೆ. ಈಗಿನ ಪ್ರೀತಿಯೇ ಬೇರೆ. ಇದೇ ಚಿತ್ರದ ಪ್ರಮುಖ ಕಥಾಹಂದರ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಏಪ್ರಿಲ್ 3 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರದ ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ಪ್ರದೀಪ್ ವರ್ಮ.

 

 

ಕಳೆದ ಕೆಲವು ವರ್ಷಗಳಿಂದ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ತಾಯಿ ಈ ಚಿತ್ರಕ್ಕೆ ಕಥೆ ಬರೆದಿದ್ದು, ತಂದೆ ನಿರ್ಮಾಣ ಮಾಡಿದ್ದಾರೆ. ಸುಂದರ ಪ್ರೇಮ ಕಥಾನಕವನ್ನು ಪ್ರದೀಪ್ ವರ್ಮ ಮನ ಮುಟ್ಟುವಂತೆ ನಿರ್ದೇಶನ ಮಾಡಿದ್ದಾರೆ. ಸಾತ್ವಿಕ ಹಾಗೂ ಶೋಭಿತ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತಕ್ಕಾಗಿ ಬೆನ್ನೆಲುಬಾಗಿ ನಿಂತಿರುವುದು ಕಾರ್ಯಕಾರಿ ನಿರ್ಮಾಪಕ ವೀರೇಶ್ ಎರೆಕುಪ್ಪಿ ಹಾಗೂ ಲೈನ್ ಪ್ರೊಡ್ಯೂಸರ್ ಹರೀಶ್ ಉಕ್ಕಡಗಾತ್ರಿ. ಏಪ್ರಿಲ್ 3 ರಂದು ದಯವಿಟ್ಟು ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರ ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎಂದು ನಾಯಕ ಅದ್ವಿಕ್ ಹೇಳಿದರು.

 

 

 

 

ಸಿನಿಮಾ ರಂಗ ಹೊಸತು. ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕ ಸಿದ್ದಲಿಂಗಯ್ಯ ಹೇಳಿದರು.

 

ದ್ವಿತೀಯ ನಾಯಕಿ ಶೋಭಿತ, ಕಲಾವಿದರಾದ, ದ್ವಿತ k ಗೌಡ, ಸಂತೃಪ್ತಿ, ಹರ್ಷಿತಾ, ನೃತ್ಯ ನಿರ್ದೇಶಕ ರಾಜು ಮಾಸ್ಟರ್ ಹಾಗೂ ವಿತರಕ ಬಸಪ್ಪ ಮುಂತಾದವರು “ಪ್ರೇಮಿ” ಚಿತ್ರದ ಬಗ್ಗೆ ಮಾತನಾಡಿದರು.

Spread the love
Click to comment

Copyright © 2019 PopcornKannada.com