Cinema News

ಮತ್ತೆ ಒಂದಾದ ‘ಪ್ರೇಮಂ’ ಜೋಡಿ; ನಿವಿನ್ ಪೌಲಿ 50ನೇ ಸಿನಿಮಾ ‘ವಿಜಯಂ’ ಘೋಷಣೆ

Published

on

ಮಲಯಾಳಂ ಸಿನಿರಂಗದ ಯಶಸ್ವಿ ಜೋಡಿ ನಟ ನಿವಿನ್ ಪೌಲಿ ಹಾಗೂ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಮತ್ತೊಮ್ಮೆ ಒಂದಾಗಿದ್ದಾರೆ. ‘ನೇರಂ’ ಮತ್ತು ಬ್ಲಾಕ್‌ಬಸ್ಟರ್ ಹಿಟ್ ‘ಪ್ರೇಮಂ’ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ಈ ಜೋಡಿ ಬರೋಬ್ಬರಿ 12 ವರ್ಷಗಳ ಬಳಿಕ ‘ವಿಜಯಂ’ ಸಿನಿಮಾಗಾಗಿ ಕೈಜೋಡಿಸಿದೆ.

 

ನಿವಿನ್ ಪೌಲಿ ಅವರ ವೃತ್ತಿಜೀವನದ 50ನೇ ಸಿನಿಮಾ ಆಗಿರುವ ‘ವಿಜಯಂ’ ಚಿತ್ರದ ಟೈಟಲ್ ವೀಡಿಯೊವನ್ನು ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ರೇಸಿಂಗ್ ಜಗತ್ತಿನ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಆಲ್ಫೋನ್ಸ್ ಪುತ್ರೇನ್ ಬರೆದು, ನಿರ್ದೇಶಿಸುವುದರ ಜೊತೆಗೆ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

 

 

 

 

 

 

ಪೌಲಿ ಜೂನಿಯರ್ ಪಿಕ್ಚರ್ಸ್ ಹಾಗೂ ಸಿನೆಹೋಲಿಕ್ಸ್ ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ವಿಜಯಂ’ ಸಿನಿಮಾಗೆ ಸ್ಟೀವ್ ಕೊಟ್ಟೂರ್ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ಈ ಹಿಂದೆ ಹಲವು ಗಮನ ಸೆಳೆದ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿರುವ ಅವರು ಈ ಚಿತ್ರದ ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

 

ಸದ್ಯ ಚಿತ್ರತಂಡ ಟೈಟಲ್ ಮಾತ್ರ ಅನಾವರಣ ಮಾಡಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ತಾರಾಬಳಗ ಹಾಗೂ ತಾಂತ್ರಿಕ ತಂಡದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ. ನಿವಿನ್ ಪೌಲಿ ಮತ್ತು ಆಲ್ಫೋನ್ಸ್ ಪುತ್ರೇನ್ ಕಾಂಬಿನೇಷನ್ ಮತ್ತೆ ತೆರೆ ಮೇಲೆ ಬರಲಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Spread the love

Copyright © 2019 PopcornKannada.com