Cinema News

ಕ್ಷಮೆ ಕೇಳಿದ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌

Published

on

ರಾಕಿಂಗ್‌ ಸ್ಟಾರ್‌ ಯಶ್‌ ಇದೇ 8ಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದು ಅಭಿಮಾನಿಗಳು ದೊಡ್ಡ ಸಂಭ್ರಮವನ್ನು ಆಚರಿಸುತ್ತಿದ್ದು, ಅದಕ್ಕೆ ಈಗಾಗಲೇ ತಯಾರಿ ಆರಂಭವಾಗಿದೆ. ಜತೆಗೆ ಅಭಿಮಾನಿಗಳಿಗೆ ಬೇಸರದ ಸಂಗತಿಯೂ ಇದೆ, ಅದೇನೆಂದರೆ ಬಹು ದಿನಗಳಿಂದ ಕಾಯುತ್ತಿದ್ದ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಟೀಸರ್‌ ಬಿಡುಗಡೆಯಾಗುತ್ತಿಲ್ಲ.

 

ಹೌದು, ಬಹಳ ದಿನಗಳಿಂದ ಶೂಟಿಂಗ್‌ ಮಾಡುತ್ತಿರುವ ಈ ಸಿನಿಮಾದ ಟೀಸರ್‌ ಹುಟ್ಟುಹಬ್ಬಕ್ಕೆ ಬರುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಯಾವುದೇ ಟೀಸರ್‌ ಬರುತ್ತಿಲ್ಲ ಎಂದು ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.

 

 

ಅಭಿಮಾನಿಗಳಲ್ಲಿ ಅವರು ಕ್ಷಮೆ ಕೇಳುತ್ತಾ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದು, ಇಡೀ ತಂಡ ಜನವರಿ 6 ರ ಸಂಜೆಯವರೆಗೂ ಶೂಟಿಂಗ್‌ನಲ್ಲಿರುತ್ತದೆ. 7 ರಂದು ಎಲ್ಲರೂ ವಾಪಾಸ್‌ ಬರಲಿದ್ದಾರೆ , ಹಾಗಾಗಿ ಟೀಸರ್‌ ಕೆಲಸಗಳು ಆಗಿಲ್ಲ ಅವಸರ ಅವಸರವಾಗಿ ಟೀಸರ್‌ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಆ ವಿಚಾರದಲ್ಲಿ ನಾವು ಕಾಂಪ್ರಮೈಸ್‌ ಆಗುವುದಿಲ್ಲ ಹಾಗಾಗಿ ಟೀಸರ್‌ ರಿಲೀಸ್‌ ಮಾಡುತ್ತಿಲ್ಲ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ ಎಂದು ಬರೆದಿದ್ದಾರೆ. ಇನ್ನು ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಸೆಕೆಂಡ್‌ ಲುಕ್‌ನ್ನು ರಿಲೀಸ್‌ ಮಾಡಲಿದ್ದೇವೆ ಎಂದು ಸಹ ಹೇಳಿದ್ದಾರೆ.

 

ಈ ಟ್ವೀಟ್‌ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ನಮಗೆ ನಿಜಕ್ಕೂ ನಿರಾಸೆಯಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ. 

Spread the love
Click to comment

Copyright © 2019 PopcornKannada.com