Cinema News

ಶಿವಣ್ಣರ ‘ರುಸ್ತುಂ’ಗೆ ಪ್ರಭುದೇವ ಶುಭ ಹಾರೈಕೆ

Published

on

ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್‌ ನಟನೆಯ ‘ರುಸ್ತುಂ’ ಚಿತ್ರಕ್ಕೆ ಬಾಲಿವುಡ್‌ ಜಾನ್‌ ಅಬ್ರಾಹಂ ಸೇರಿದಂತೆ ಸಾಕಷ್ಟು ಮಂದಿ ಶುಭಾಶಯ ಕೋರಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಕೂಡಾ ಶುಭಾಶಯ ಕೋರಿದ್ದು, ಸಿನಿಮಾ ದೊಡ್ಡ ಹಿಟ್‌ ಆಗಲಿ ಎಂದು ಹೇಳಿದ್ದಾರೆ.

 

 

ಶಿವರಾಜ್‌ಕುಮಾರ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಸಾಹಸ ನಿರ್ದೇಶಕ ರವಿ ವರ್ಮಾ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾಗಿ ರವಿವರ್ಮಾಗೆ ಇದು ಮೊದಲ ಚಿತ್ರವಾಗಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

 

 

ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್‌ಗೆ ಇದರಲ್ಲಿ ಶ್ರದ್ಧಾ ಶ್ರೀನಾಥ್‌ ಜೋಡಿಯಾಗಿ ನಟಿಸುತ್ತಿದ್ದಾರೆ. ಮಯೂರಿ, ರಚಿತಾ ರಾಮ್‌, ವಿವೇಕ್‌ ಓಬೇರಾಯ್‌ ಸಹ ನಟಿಸಿರುವ ಈ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ.

 

 

Spread the love

Copyright © 2019 PopcornKannada.com