Cinema News

ಪವರ್‌ಫುಲ್ ಫೈಟ್‌ಗಳು, ಪ್ರೇಮಕಥೆಯ ಝಲಕ್; ‘ದೊಡ್ಮನ್ಸ’ ಟ್ರೇಲರ್ ಬಿಡುಗಡೆ

Published

on

ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ದೊಡ್ಮನ್ಸ’ ಚಿತ್ರದ ಪವರ್‌ಪ್ಯಾಕ್ಡ್ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಶರತ್ ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಅವರೇ ನಾಯಕನಾಗಿ ನಟಿಸಿದ್ದು, ರೇಷ್ಮಾ ಹಾಗೂ ಶಿಲ್ಪಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಟ್ರೇಲರ್‌ನಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳು, ಮಾಸ್ ಡೈಲಾಗ್‌ಗಳು ಮತ್ತು ನಾಯಕನ ವಿಭಿನ್ನ ಅವತಾರಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

 

ಟ್ರೇಲರ್‌ನಲ್ಲಿ ಕೇವಲ ಆಕ್ಷನ್ ಮಾತ್ರವಲ್ಲದೆ, ಭಾವನಾತ್ಮಕ ಅಂಶಗಳು ಮತ್ತು ಮುಗ್ಧ ಪ್ರೇಮಕಥೆಯ ಝಲಕ್ ಕೂಡ ಕಾಣಸಿಗುತ್ತದೆ. ಹೀಗಾಗಿ ಚಿತ್ರವು ಸಂಪೂರ್ಣ ಮನರಂಜನಾ ಪ್ಯಾಕೇಜ್ ಆಗಿರಲಿದೆ ಎಂಬ ಭರವಸೆಯನ್ನು ಚಿತ್ರತಂಡ ಮೂಡಿಸಿದೆ. ವಿಶೇಷವಾಗಿ ಫೈಟ್ ಸೀಕ್ವೆನ್ಸ್‌ಗಳು ಹಾಗೂ ಮಾಸ್ ಎಲಿವೇಶನ್ ದೃಶ್ಯಗಳು ಆಕ್ಷನ್ ಪ್ರಿಯರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

 

 

 

 

 

 

ಈ ಸಂದರ್ಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ಶರತ್ ಕೃಷ್ಣ, ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತಾವು ಎದುರಿಸಿದ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಹಿಂದೆ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ದೊಡ್ಡ ಸವಾಲು ಎಂದು ಹೇಳುತ್ತಿದ್ದರು. ಆದರೆ ನಟನಾಗುವ ಕನಸನ್ನು ಬೆನ್ನಟ್ಟಿದಾಗ ಅದಕ್ಕಿಂತಲೂ ದೊಡ್ಡ ಹೋರಾಟ ಎದುರಿಸಬೇಕಾಯಿತು. ಈ ಪ್ರಯಾಣದಲ್ಲಿ ತಮ್ಮ ಕುಟುಂಬದ ಬೆಂಬಲ ಹಾಗೂ ಸ್ನೇಹಿತರ ಸಹಕಾರವೇ ದೊಡ್ಡ ಶಕ್ತಿಯಾಯಿತು ಎಂದು ಹೇಳಿದರು.

 

 

 

 

 

 

‘ದೊಡ್ಮನ್ಸ’ ನನ್ನ ಕನಸಿನ ಪ್ರಾಜೆಕ್ಟ್. ಒನ್ ಮ್ಯಾನ್ ಆರ್ಮಿಯಂತೆ ಶ್ರಮಪಟ್ಟು ಈ ಚಿತ್ರವನ್ನು ರೂಪಿಸಿದ್ದೇನೆ. ದೇವರ ಆಶೀರ್ವಾದ ಮತ್ತು ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸವಿದೆ ಎಂದು ಶರತ್ ಕೃಷ್ಣ ತಿಳಿಸಿದರು. ಚಿತ್ರದಲ್ಲಿ ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಅಭಿನಯಿಸಿದ್ದು, ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Spread the love

Copyright © 2019 PopcornKannada.com