Cinema News
ಟ್ರೇಲರ್‌ನಲ್ಲೇ ಸದ್ದು ಮಾಡಿದ ‘ಪಿಚ್ಚರ್’; ಆಗಸ್ಟ್ 7ಕ್ಕೆ ಅದ್ದೂರಿ ಬಿಡುಗಡೆ
ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕಿ ಶಿಲ್ಪಾ ಗಣೇಶ್ ನಿರ್ಮಿಸಿರುವ, ಸಂದೀಪ್ ಬೆದ್ರ ನಿರ್ದೇಶನದ ಚೊಚ್ಚಲ ಸಿನಿಮಾ ‘ಪಿಚ್ಚರ್’ ಬಿಡುಗಡೆಯತ್ತ ಹೆಜ್ಜೆಯಿಟ್ಟಿದೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ, ಅಮೃತ ಸುದು ನಾಯಕಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾದ ಚಿತ್ರದ ಟ್ರೇಲರ್ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದು, ಹೆಚ್ಚಿನ ವೀಕ್ಷಣೆಗಳೊಂದಿಗೆ ಎಲ್ಲರ ಗಮನ ಸೆಳೆದಿದೆ. ಇದೀಗ ಚಿತ್ರವು ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.
ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿ ಮೂಡಿಬಂದಿರುವ ‘ಪಿಚ್ಚರ್’ ಕೌಟುಂಬಿಕ ಹಾಗೂ ಹಾಸ್ಯಭರಿತ ಕಥಾಹಂದರವನ್ನು ಒಳಗೊಂಡಿದೆ. ನಿರ್ದೇಶಕ ಸಂದೀಪ್ ಬೆದ್ರ ಅವರ ಮೊದಲ ನಿರ್ದೇಶನದ ಚಿತ್ರವಾಗಿರುವ ಇದಕ್ಕೆ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಕೆ.ಎಸ್ ಛಾಯಾಗ್ರಹಣ, ರಾಜು ಆರ್ಯನ್ ಸಂಕಲನ, ಧನಂಜಯ್.ಬಿ ಹಾಗೂ ಶ್ರೀರಾಜು ನೃತ್ಯ ನಿರ್ದೇಶನ ನೀಡಿದ್ದಾರೆ. ರಾಧೇಶ್ ಮತ್ತು ಸಂತೋಷ್ ಪೂಜಾರಿ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮೋಹನ್ ಭಟ್ಕಳ್ ಕಾರ್ಯನಿರ್ವಹಿಸಿದ್ದು, ಸ್ಯಾಮುಯೆಲ್ ಅಭಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರದಲ್ಲಿ ನಿರ್ಮಾಪಕಿ ಶಿಲ್ಪಾ ಗಣೇಶ್ ಸ್ವತಃ ‘ಗೋಕುಲದ ರಾಧೆ’ ಹಾಡಿಗೆ ಧ್ವನಿಯಾಗಿರುವುದು ವಿಶೇಷ ಆಕರ್ಷಣೆಯಾಗಿದೆ.
ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಪೂಜಾರ್, ಜಯಶೀಲ ಮರೋಳಿ ಹಾಗೂ ರೂಪ ವರ್ಕಾಡಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ಈಗಾಗಲೇ ನಿರೀಕ್ಷೆ ಮೂಡಿಸಿರುವ ‘ಪಿಚ್ಚರ್’ ಆಗಸ್ಟ್ 7ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.