Cinema News

ಕಂಟೆಂಟ್‌ನಿಂದ ಗೆದ್ದ ‘ಪೀಟರ್’ – ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿರುವ ಚಿತ್ರ

Published

on

ಜನ ಮೆಚ್ಚಿದ ‘ಪೀಟರ್’ ಸಿನಿಮಾ ಈಗ ಯಶಸ್ವಿಯಾಗಿ ಎರಡನೇ ವಾರದತ್ತ ಸಾಗುತ್ತಿದೆ. ಈ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಅನೇಕ ಚಿತ್ರಗಳಲ್ಲಿ ಕೆಲವೇ ಕೆಲವು ಮಾತ್ರ ಪ್ರೇಕ್ಷಕರ ಗಮನ ಸೆಳೆದಿವೆ. ಆ ಪಟ್ಟಿಗೆ ‘ಪೀಟರ್’ ಕೂಡ ಸೇರಿಕೊಂಡಿದ್ದು, ಏಪ್ರಿಲ್ 10ರಂದು ಕೆ.ವಿ.ಎನ್ ವಿತರಣೆ ಮೂಲಕ ರಾಜ್ಯದಾದ್ಯಂತ ಬಿಡುಗಡೆಯಾದ ಬಳಿಕ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ವಿಶೇಷವಾಗಿ ಹೆಚ್ಚು ಮೆಚ್ಚುಗೆ ಸಿಕ್ಕಿದ್ದು, ಸಿಂಗಲ್ ಸ್ಕ್ರೀನ್‌ಗಳಲ್ಲೂ ಚಿತ್ರದ ಓಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

 

 

 

 

 

 

ಮಂಡ್ಯ, ಮೈಸೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ನಗರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಟಾರ್ ನಟರಿಲ್ಲದಿದ್ದರೂ ‘ಪೀಟರ್’ ತನ್ನ ಕಥಾವಸ್ತು ಮತ್ತು ಗುಣಮಟ್ಟದಿಂದಲೇ ಪ್ರೇಕ್ಷಕರ ಗಮನ ಸೆಳೆದಿದೆ. ಮಾಧ್ಯಮಗಳಲ್ಲಿ ಬಂದಿರುವ ಪಾಸಿಟಿವ್ ವಿಮರ್ಶೆಗಳು ಹಾಗೂ ಜನಮೆಚ್ಚುಗೆ ಚಿತ್ರವನ್ನು ಮತ್ತಷ್ಟು ಜನರಿಗೆ ತಲುಪಿಸುತ್ತಿವೆ. ಮೊದಲ ವಾರವನ್ನು ಯಶಸ್ವಿಯಾಗಿ ಮುಗಿಸಿದ ಈ ಸಿನಿಮಾ ಎರಡನೇ ವಾರದಲ್ಲೂ ಉತ್ತಮ ಪ್ರದರ್ಶನ ಮುಂದುವರಿಸುತ್ತಿದೆ.

 

 

 

 

 

 

ಚಿತ್ರದ ಕಥೆ ಮತ್ತು ಚಿತ್ರಕಥೆ ವಿಭಿನ್ನವಾಗಿದ್ದು, ಪ್ರತಿಯೊಂದು ಪಾತ್ರವೂ ಮನಸೂರೆಗೊಳ್ಳುತ್ತದೆ. ತಾಂತ್ರಿಕವಾಗಿ ಕೂಡ ಉತ್ತಮ ಮಟ್ಟದ ನಿರ್ಮಾಣ ಮೌಲ್ಯ ಹೊಂದಿರುವ ‘ಪೀಟರ್’, ಪರಭಾಷಾ ಸಿನಿಮಾಗಳಿಗೆ ಸಾಟಿ ನೀಡುತ್ತದೆ. ‘ದೂರದರ್ಶನ’ ಚಿತ್ರದ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ, ಪ್ರೇಕ್ಷಕರ ನಾಡಿ ಹಿಡಿದ ಕಥೆ ಹೇಳುವಲ್ಲಿ ಮತ್ತೆ ಯಶಸ್ವಿಯಾಗಿದ್ದಾರೆ. ವೃದ್ಧಿ ಸ್ಟುಡಿಯೋಸ್ ಜೊತೆಗೂಡಿ ನಿರ್ಮಿಸಿರುವ ಈ ಚಿತ್ರ ಇತ್ತೀಚಿನ ಕನ್ನಡ ಕಂಟೆಂಟ್ ಸಿನಿಮಾಗಳಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಿದೆ.

Spread the love
Click to comment

Copyright © 2019 PopcornKannada.com