Cinema News

ಹೊಂಬಾಳೆ ಫಿಲಂಸ್ ಹಂಚಿಕೆಯಲ್ಲಿ ಏಪ್ರಿಲ್ 15ರಂದು ‘ಪಳ್ಳಿ ಚಟ್ಟಂಬಿ’ ತೆರೆಗೆ

Published

on

ಏಪ್ರಿಲ್ 15ರಂದು ಟೊವಿನೋ ಥಾಮಸ್ ಹಾಗೂ ಕಯಾದು ಲೋಹರ್ ಅಭಿನಯದ ‘ಪಳ್ಳಿ ಚಟ್ಟಂಬಿ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಮಲಯಾಳಂ ಜೊತೆಗೆ ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಕರ್ನಾಟಕದಲ್ಲಿ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಹಂಚಿಕೆ ಮಾಡುತ್ತಿದೆ. ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

 

 

ಈ ಸಿನಿಮಾವನ್ನು ನೌಫಲ್, ಬ್ರಿಜೇಶ್, ಚಾಣುಕ್ಯ ಚೈತನ್ಯ ಮತ್ತು ಚರಣ್ ನಿರ್ಮಿಸಿದ್ದು, ಡಿಜೋ ಜೊಸೆ ಆಂಟೋನಿ ನಿರ್ದೇಶಿಸಿದ್ದಾರೆ. 1950ರ ಕಾಲಘಟ್ಟದ ಹಳ್ಳಿಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಟೊವಿನೋ ‘ಪಳ್ಳಿ ಚಟ್ಟಂಬಿ’ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಯಾದು ಲೋಹರ್ ‘ರೆಬೇಕಾ’ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 

 

 

 

 

 

 

ಟೊವಿನೋ ಥಾಮಸ್ ಮಾತನಾಡಿ, ಕರ್ನಾಟಕದೊಂದಿಗೆ ತನ್ನ ವಿಶೇಷ ನಂಟನ್ನು ಹಂಚಿಕೊಂಡರು. ತಮ್ಮ ಸಿನಿಮಾಗಳು ಇಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಬಾಲ್ಯದಿಂದಲೇ ಬೆಂಗಳೂರು ಮತ್ತು ಮೈಸೂರು ಕಡೆಗೆ ಭೇಟಿ ನೀಡುತ್ತಿದ್ದೆ ಎಂದು ಹೇಳಿದರು. ‘ಡಿಯರ್ ಫ್ರೆಂಡ್’ ಚಿತ್ರದ ಚಿತ್ರೀಕರಣದ ವೇಳೆ ಒಂದು ತಿಂಗಳು ಬೆಂಗಳೂರಿನಲ್ಲಿ ಉಳಿದಿದ್ದ ಅನುಭವವನ್ನೂ ಅವರು ನೆನಪಿಸಿಕೊಂಡರು. ದಕ್ಷಿಣ ಭಾರತದ ಭಾಷೆಗಳ ನಡುವೆ ಇರುವ ಆಪ್ತತೆಯನ್ನು ಉಲ್ಲೇಖಿಸಿ, “ನಾವು ಕೇವಲ ನೆರೆಹೊರೆಯವರು ಅಲ್ಲ, ನಾವು ರಕ್ತ ಸಂಬಂಧಿಗಳು” ಎಂದು ಹೇಳಿದರು. ಈ ಸಿನಿಮಾದಲ್ಲಿ ಯಕ್ಷಗಾನದ ಬಳಕೆ ಇರುವುದೂ ವಿಶೇಷವಾಗಿದ್ದು, ಕನ್ನಡ ಸಂಭಾಷಣೆಗಳೂ ಇರಲಿವೆ ಎಂದು ತಿಳಿಸಿದರು.

 

 

ನಿರ್ದೇಶಕ ಡಿಜೋ ಜೊಸೆ ಆಂಟೋನಿ ಮಾತನಾಡಿ, ಹಳ್ಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದರು. ಕಥೆ ಕೇಳುತ್ತಿದ್ದಂತೆಯೇ ಟೊವಿನೋ ಒಪ್ಪಿಕೊಂಡರು ಎಂದು ಹೇಳಿದರು. 2018ರಲ್ಲಿ ತಮ್ಮ ಮೊದಲ ಸಿನಿಮಾ ಮಾಡಿದ ಬಳಿಕ ಈ ಚಿತ್ರವನ್ನು ಆರಂಭಿಸಿದ್ದು, ಈಗ ಬಿಡುಗಡೆಗೆ ಸಜ್ಜಾಗಿದೆ ಎಂದು ಹೇಳಿದರು.

 

 

 

 

 

ನಟಿ ಕಯಾದು ಲೋಹರ್ ಮಾತನಾಡಿ, ‘ರೆಬೇಕಾ’ ಪಾತ್ರ ತಮ್ಮ ಕನಸಿನ ಪಾತ್ರವಾಗಿದ್ದು, ಅದಕ್ಕಾಗಿ ಸಂಪೂರ್ಣ ಶ್ರಮ ಹೂಡಿದ್ದೇನೆ ಎಂದರು. ‘ಮುಗಿಲ್ ಪೇಟೆ’ ಮೂಲಕ ಕನ್ನಡದಲ್ಲಿ ಆರಂಭವಾದ ತಮ್ಮ ಪ್ರಯಾಣಕ್ಕೆ ಸಿಕ್ಕ ಪ್ರೀತಿಯನ್ನು ಈ ಸಿನಿಮಾಗೂ ನೀಡುವಂತೆ ಅವರು ವಿನಂತಿಸಿದರು.

 

ಈ ಚಿತ್ರಕ್ಕೆ ಎಸ್. ಸುರೇಶ್ ಬಾಬು ಕಥೆ, ಟಿಜೋ ಟಾಮಿ ಛಾಯಾಗ್ರಹಣ, ಶ್ರೀಜಿತ್ ಸಾರಂಗ್ ಸಂಕಲನ ಹಾಗೂ ಜೇಕ್ಸ್ ಬಿಜೋಯ್ ಸಂಗೀತ ನೀಡಿದ್ದಾರೆ.

Spread the love
Click to comment

Copyright © 2019 PopcornKannada.com