News

ʼಪಪ್ಪಿʼ ಸಿನಿಮಾ ಟ್ರೇಲರ್ ಗೆ ಪದ್ಮಾವತಿ ಫಿದಾ.. ಮಕ್ಕಳ ಅಭಿನಯ ಮೆಚ್ಚಿ ಸೈಕಲ್ ಗಿಫ್ಟ್‌ ಮಾಡಿದ ರಮ್ಯಾ!

Published

on

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಶ್ವಾನಪ್ರಿಯೆ ಅನ್ನೋದು ಸಿನಿಮಾಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ. ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಮೋಹಕತಾರೆ ಈಗ ಶ್ವಾನದ ಸುತ್ತ ಸಾಗುವ ಜವಾರಿ ಭಾಷೆಯ ಪಪ್ಪಿ ಸಿನಿಮಾದ‌ ಕಂಟೆಂಟ್ ಗೆ ಪದ್ಮಾವತಿ ಫಿದಾ ಆಗಿದ್ದಾರೆ.

ರಮ್ಯಾ ಈ ಹಿಂದೆಯೇ ಪಪ್ಪಿ ಟ್ರೇಲರ್‌ ನೋಡಿ ಮೆಚ್ಚಿಕೊಂಡಿದ್ದರು. ಇಂದು ಈ ಸಿನಿಮಾ ಕಂಡಿದೆ.‌ ಶ್ವಾನ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಮಕ್ಕಳ ನಟನೆಗೆ ಮನಸೋತಿರುವ ರಮ್ಯಾ ಅವರಿಗೆ ಸೈಕಲ್‌ ಗಿಫ್ಟ್‌ ಮಾಡಿದ್ದಾರೆ.

ಪಪ್ಪಿ ಸಿನಿಮಾದಲ್ಲಿ ಬಾಲ ಕಲಾವಿದರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಈ ಮಕ್ಕಳ ನಟನೆ ಇಷ್ಟಪಟ್ಟು ರಮ್ಯಾ ಅವರಿಗೆ ಸೈಕಲ್‌ ಉಡುಗೊರೆಯಾಗಿ ನೀಡಿದ್ದಾರೆ.

ಅಪ್ಪಟ ಉತ್ತರ ಕರ್ನಾಟಕದ ಭಾಷೆ ಒಳಗೊಂಡ ಕೌಟುಂಬಿಕ ಚಿತ್ರವಾಗಿರುವ ಪಪ್ಪಿ ಇಂದು ಬಿಡುಗಡೆಯಾಗಿದೆ. ರಮ್ಯಾ ಕೂಡ ಶೀಘ್ರದಲ್ಲೇ ಸಿನಿಮಾ ನೋಡಲಿದ್ದಾರೆ. ಧ್ರುವ ಸರ್ಜಾ ಅರ್ಪಿಸಿರುವ ಈ ಸಿನಿಮಾಗೆ ಆಯುಷ್‌ ಮಲ್ಲಿ ಆಕ್ಷನ್‌ ಕಟ್‌ ಹೇಳಿದ್ದಾರೆ.

ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ಜೊತೆಗೆ ಅದೃಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಬಿ ಸುರೇಶ್‌ ಬಾಬು ಕ್ಯಾಮರಾ ಕೈಚಳಕವಿದೆ. ವಿಶ್ವ.ಎನ್‌.ಎಂ ಸಂಕಲನ ನಿರ್ವಹಿಸಿದ್ದಾರೆ. ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ಪಪ್ಪಿಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ.

Spread the love
Click to comment

Copyright © 2019 PopcornKannada.com