Cinema News

ಯಶಸ್ಸಿನ ಹಾದಿಯಲ್ಲಿ “Congratulations ಬ್ರದರ್”. .

Published

on

ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನದ, ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್, ಅನುಷಾ ನಾಯಕಿಯರಾಗಿ ನಟಿಸಿರುವ “congratulations ಬ್ರದರ್” ಚಿತ್ರ ನವೆಂಬರ್ 21 ರಂದು ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ಮೊದಲು ಮಾತನಾಡಿದ ನಿರ್ಮಾಪಕ ಪ್ರಶಾಂತ್ ಕಲ್ಲೂರ್, ನಾನು ಸದ್ಯಕ್ಕೆ ಚಿತ್ರ ನಿರ್ಮಾಣ ಮಾಡಬೇಕೆಂದುಕೊಂಡಿರಲಿಲ್ಲ. ಆದರೆ ಹರಿ ಸಂತೋಷ್ ಅವರು ನನ್ನ ಬಿಡಲಿಲ್ಲ. ಆನಂತರ ನಾನು ಈ ಹೊಸತಂಡದ ಜೊತೆಗೆ ನಿಂತೆ. ಹರಿ ಸಂತೋಷ್ ಕ್ರಿಯೇಟಿವ್ ಹೆಡ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರತಂಡದವರು ಕೂಡ. ಎರಡನೇ ವಾರದಲ್ಲೂ ಜನ ನಮ್ಮ ಚಿತ್ರವನ್ನು ನೋಡುತ್ತಿದ್ದಾರೆ. ನಾನು ಕೂಡ ಇತ್ತೀಚಿಗೆ ನನ್ನ ಕುಟುಂಬದವರ ಜೊತೆಗೆ ಹೋಗಿ ಸಿನಿಮಾ ನೋಡಿದೆ. ಸಿನಿಮಾ ನೋಡಿದ ನನ್ನ ಅಪ್ಪ ಬೆನ್ನು ತಟ್ಟಿದ್ದರು. ನನಗೆ‌ ನಿಜವಾದ ಗೆಲುವು ಅದು. ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ನಿಮ್ಮೆಲ್ಲರಿಗೂ ಧನ್ಯವಾದ. ಇನ್ನೂ ಮುಂದೆ ನಮ್ಮ ಸಂಸ್ಥೆಯಿಂದ ಎರಡು ವರ್ಷಗಳಿಗೆ ಮೂರು ಸಿನಿಮಾ ಮಾಡುವ ಯೋಜನೆ ಇದೆ ಎಂದರು.

 

 

 

 

 

ನಾನು ಕೆಲಸವನ್ನು ಬಹಳ ಇಷ್ಟ ಪಡುವವನು. ನನಗೆ ಸಿಕ್ಕಿರುವ ತಂಡವೂ ಹಾಗೆ ಇದೆ. ಎಲ್ಲರೂ ಈ ಸಿನಿಮಾಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಬಿಡುಗಡೆ ಪೂರ್ವದಲ್ಲಿ ರಾಜ್ಯದ 24 ಜಿಲ್ಲೆಗಳಿಗೂ ನಮ್ಮ ಜೊತೆಗೆ ಭೇಟಿ ನೀಡಿದ್ದಾರೆ. ಹಾಗಾಗಿ ಈ ಚಿತ್ರ ಕರ್ನಾಟಕದ ಜನರನ್ನು ತಲುಪಿದೆ. ನಿರ್ಮಾಪಕ ಪ್ರಶಾಂತ್ ಕಲ್ಲೂರ್, ನ್ಯೂಸ್ ಫಸ್ಟ್ ರವಿಕುಮಾರ್ ಹಾಗೂ ಹರೀಶ್ ರೆಡ್ಡಿ ಅವರ ಸಹಕಾರ ಅಪಾರ. ನಮ್ಮ ಚಿತ್ರ ನೋಡಿದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಬೇರೆ ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ. ಇದಕ್ಕಿಂತ ಖುಷಿ ಬೇರೆ ಏನು ಬೇಕು ಎಂದರು ಕ್ರಿಯೇಟಿವ್ ಹೆಡ್ ಹರಿ ಸಂತೋಷ್.

 

ಧಾರಾವಾಹಿ ನಿರ್ದೇಶಕ ಹೇಗೆ ಸಿನಿಮಾ ಮಾಡಿರಬಹುದು ಎಂಬ ಭಾವನೆ ಹಲವರಲ್ಲಿತ್ತು. ಆದರೆ ಸಿನಿಮಾ ನೋಡಿ ಮೇಲೆ ಧಾರಾವಾಹಿಯ ಛಾಯೆ ಇದರಲ್ಲಿ ಇಲ್ಲ ಎಂದು ನೋಡಿದವರು ಹೇಳಿದ್ದಾರೆ. ನನ್ನನ್ನು ನಂಬಿ ಬಂಡವಾಳ ಹಾಕಿದ ನಿರ್ಮಾಪಕರಿಗೆ,‌ ತಾವು ಒಬ್ಬ ನಿರ್ದೇಶಕನಾಗಿದ್ದರೂ, ನನಗೆ ನಿರ್ದೇಶನದಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿದ ಹರಿ ಸಂತೋಷ್ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದು ನಿರ್ದೇಶಕ ಪ್ರತಾಪ್ ಗಂಧರ್ವ ಹೇಳಿದರು.

 

 

 

 

 

ಈ ಚಿತ್ರದಲ್ಲಿ ನಟಿಸಿದ ಮೇಲೆ ನನಗೆ ಎರಡುಮೂರು ಚಿತ್ರಗಳಲ್ಲಿ ನಟಿಸುವ ಅವಾಕಾಶ ಬಂದಿದೆ. ಇದು ಸಾಧ್ಯವಾಗಿದ್ದು ಈ ಚಿತ್ರದ ನಿರ್ಮಾಪಕರು ಹಾಗೂ ಹರಿ ಸಂತೋಷ್ ಅವರಿಂದ ಎಂದು ನಾಯಕ ರಕ್ಷಿತ್ ನಾಗ್ ಹೇಳಿದರು.

 

ನಾಯಕಿಯರಾದ ಸಂಜನ ದಾಸ್, ಅನೂಷ ಹಾಗೂ ಚಿತ್ರದಲ್ಲಿ ನಟಿಸಿರುವ ಸುದರ್ಶನ್, ಚೇತನ್ ದುರ್ಗ ಸೇರಿದಂತೆ ಚಿತ್ರತಂಡದ ಸದಸ್ಯರು ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.

Spread the love
Click to comment

Copyright © 2019 PopcornKannada.com