Cinema News

ಈ ವಾರದಿಂದ ವಿದೇಶದಲ್ಲೂ “ಓಲ್ಡ್ ಮಾಂಕ್” .

Published

on

ಶ್ರೀನಿ ನಿರ್ದೇಶಿಸಿ, ನಟಿಸಿರುವ “ಓಲ್ಡ್ ಮಾಂಕ್” ಚಿತ್ರ ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ಎಲ್ಲರೂ ಸಕ್ಸಸ್ ಮೀಟ್ ಅಂತ ಮಾಡುತ್ತಾರೆ. ಆದರೆ ನಾವು ಚಿತ್ರ ಸಕ್ಸಸ್ ‌ಆಗಲಿ ಅಂತ ಪತ್ರಿಕಾಗೋಷ್ಠಿ ಆಯೋಜಿಸಿದ್ದೇವೆ. ನಮ್ಮ ಚಿತ್ರ ಬಿಡುಗಡೆಯಾಗಿ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌ ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದೇವೆ.‌ ಅಷ್ಟೇ ಅಲ್ಲದೇ ಕೆನಡಾ, ಯು ಎಸ್ ಎ ಹಾಗೂ ಆಸ್ಟ್ರೇಲಿಯಾದಲ್ಲೂ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ.
ಪರಭಾಷಾ ಚಿತ್ರಗಳನ್ನು ಆಮೇಲೆ ನೋಡಿ.‌ ಮೊದಲು ಕನ್ನಡ ಚಿತ್ರ ನೋಡಿ. ಈ ಚಿತ್ರ ನೋಡಿರುವವರನ್ನು ಒಮ್ಮೆ
ಕೇಳಿ. ಅವರು ಚೆನ್ನಾಗಿದೆ ಅಂದರೆ ಮಾತ್ರ ಹೋಗಿಬನ್ನಿ ಎಂದು ಶ್ರೀನಿ ಕನ್ನಡ ಸಿನಿಪ್ರೇಕ್ಷಕರಲ್ಲಿ ಮನವಿ ಮಾಡಿದರು.

 

 

 

 

ಶ್ರೀನಿ ಮಾತಿಗೆ ಜೊತೆಗೂಡಿಸಿದ ನಾಯಕಿ ಅದಿತಿ ಪ್ರಭುದೇವ ಸಹ ಉತ್ತಮ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು. ಚಿತ್ರದಲ್ಲಿ ಉತ್ತಮ ಪಾತ್ರ ದೊರಕಿದ್ದಕ್ಕೆ ಸಂತಸ ಪಟ್ಟರು.

ನನ್ನ ಪಾತ್ರಕ್ಕೆ ಸಿಕ್ಕಿರುವ ಮನ್ನಣೆಗೆ ನಾನು ಆಭಾರಿ.‌ ಅವಕಾಶ ಕೊಟ್ಟ ಶ್ರೀನಿ ಅವರಿಗೆ ಧನ್ಯವಾದ. ಒಳ್ಳೆಯ ಚಿತ್ರ ಎಂದು ನೋಡಿದವರು ಹೇಳುತ್ತಿದ್ದಾರೆ. ಇನ್ನಷ್ಟು ಜನ ನಮ್ಮ ಚಿತ್ರ ನೋಡಿ ಗೆಲ್ಲಿಸಿ ಎಂದರು ಸುಜಯ್ ಶಾಸ್ತ್ರಿ.

ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ
ವಿತರಕರಾದ ಅಭಿಜಿತ್ ಎಂಟರ್ ಪ್ರೈಸಸ್ ಅವರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Spread the love

Copyright © 2019 PopcornKannada.com