Cinema News

ನಾಗಚೈತನ್ಯ ಜೊತೆ ಯಾವುದೇ ಸಂಬಂಧ ಇಲ್ಲ: ಸ್ಪಷ್ಟನೆ ಕೊಟ್ಟ ನಟಿ ಶೋಭಿತಾ

Published

on

ನಟಿ ಸಮಂತ ರಿಂದ ದೂರವಾದ ಬಳಿಕ ನಟ ನಾಗಚೈತನ್ಯ ನಟಿ ಶೋಭಿತಾ ದೂಲಿಪಾಲ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನಾಗಚೈತನ್ಯ ಮಾಜಿ ಪತ್ನಿ ಸಮಂತಾ ಕೂಡ ಪರೋಕ್ಷವಾಗಿ ಈ ಜೋಡಿಗೆ ಟಾಂಗ್ ಕೊಟ್ಟಿದ್ದರು. ಹಾಗಾಗಿ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಇದೀಗ ನಟಿ ಶೋಭಿತಾ ಸ್ಪಷ್ಟನೆ ನೀಡಿದ್ದು ನಾಗಚೈತನ್ಯ ಜೊತೆ ಲವ್ವೂ ಇಲ್ಲ ಡೇಟಿಂಗ್ ಕೂಡ ನಡೆದಿಲ್ಲ ಎಂದಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಶೋಭಿತಾ, ‘ನಾನು ಈವರೆಗೂ ನಾಗಚೈತನ್ಯ ಅವರನ್ನು ಭೇಟಿಯಾಗಿದ್ದು ಕೇವಲ ಎರಡೇ ಎರಡು ಬಾರಿ ಮಾತ್ರ. ಅದೂ ಹಾಯ್, ಬೈ ಲೆಕ್ಕದಲ್ಲಿ ಮಾತ್ರ. ತೀರಾ ಪರಿಚಯವೂ ಇಲ್ಲ. ಕ್ಲೋಸ್ ಕೂಡ ಇಲ್ಲ. ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವ ಸುದ್ದಿ ಹೇಗೆ ಹರಡಿತೋ ಗೊತ್ತಿಲ್ಲ. ಈ ವಿಷಯ ನನಗೂ ತಲುಪಿದಾಗ ಅಚ್ಚರಿ ಆಯಿತು. ಶಾಕ್ ಕೂಡ ಆಯಿತು ಎಂದಿದ್ದಾರೆ.
ನಾಗಚೈತನ್ಯ ಜೊತೆ ಶೋಭಿತಾ ಮದುವೆ ಆಗಲಿದ್ದಾರೆ. ಈ ಮದುವೆಗೆ ನಾಗಾರ್ಜುನ್ ಕುಟುಂಬ ಕೂಡ ಸಮ್ಮತಿಸಿದೆ. ಸದ್ಯದಲ್ಲೇ ಹಸೆ ಮಣೆ ಏರಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಇದೀಗ ಶೋಭಿತಾ ಎಲ್ಲದಕ್ಕೂ ತೆರೆ ಎಳೆದಿದ್ದಾರೆ.

Spread the love

Copyright © 2019 PopcornKannada.com