Cinema News
ಕುರುಕ್ಷೇತ್ರಕ್ಕೆ ಡಬ್ಬಿಂಗ್ ಮಾಡಿದ ನಿಖಿಲ್
ಸ್ಯಾಂಡಲ್‌ವುಡ್ನ ಬಹು ನಿರೀಕ್ಷೆಯ ಸಿನಿಮಾ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಿನ ರೋಲ್‌ನಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಅವರಿನ್ನೂ ಡಬ್ಬಿಂಗ್ ಮಾಡಿರಲಿಲ್ಲ, ಆದರೆ ಸೋಮವಾರ ತಾವೇ ಡಬ್ಬಿಂಗ್ ಸ್ಟುಡಿಯೋಗೆ ಹೋಗಿ ಡಬ್ ಮಾಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಅವರು, ಟ್ರೇಲರ್ ನೋಡಿ ಖುಷಿಯಾಯಿತು. ರಾಜಕೀಯದಲ್ಲಿ ಬಿಝಿ ಇದ್ದ ಕಾರಣ ಡಬ್ಬಿಂಗ್ ಮಾಡಲು ಆಗಿರಲಿಲ್ಲ. ಈಗ ಅದಕ್ಕೆ ಸಮಯ ಮಾಡಿಕೊಂಡು ಬಂದು ಡಬ್ಬಿಂಗ್ ಮಾಡಿದ್ದೇನೆ. ಸಿನಿಮಾ ಖಂಡಿತಾ ಜನ ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.
ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9 ರಂದು ಬಿಡುಗಡೆ ಮಾಡುತ್ತಿದ್ದಾರೆ ನಿರ್ಮಾಪಕ ಮುನಿರತ್ನ.