Cinema News
ಕರ್ನಾಟಕದ 250 ಸ್ಕ್ರೀನ್ ಗಳಲ್ಲಿ ಸೂರ್ಯ ಅಭಿನಯದ NGK ತೆರೆಗೆ
ಸೂರ್ಯ ನಟನೆಯ ಭಾರಿ ನೀರಿಕ್ಷೆ ಹುಟ್ಟಿಸಿರುವ ಎನ್‌ಜಿಕೆ ಸಿನಿಮಾ ತಮಿಳು ಮತ್ತು ತೆಲುಗು ಭಾಷೆ ಸೇರಿ ವಿಶ್ವದಾದ್ಯಂತ 2350 ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದೆ.
ಧನುಷ್ ಸಹೋದರ ಸೆಲ್ವ ರಾಘವನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಪೊಲಿಟಿಕಲ್ ಡ್ರಾಮಾ ಆಗಿದ್ದು, ಸೂರ್ಯ ಜತೆ ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮತ್ತು ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ.
ಸೂರ್ಯ ಈ ಸಿನಿಮಾದಲ್ಲಿ ಯುವ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಟ್ರೇಲರ್‌ನ್ನು ನೋಡಿದರೆ ತಿಳಿಯುತ್ತದೆ.
ಕರ್ನಾಟಕದಲ್ಲಿ ಚಿತ್ರವನ್ನು ಧೀರಜ್ ಎಂಟರ್ ಪ್ರೈಸಸ್ ಬಿಡುಗಡೆಗೊಳಿಸುತ್ತಿದೆ. ಕರ್ನಾಟಕದಲ್ಲಿ ಸುಮಾರು 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ .
ಒಟ್ಟಿನಲ್ಲಿ ಸೂರ್ಯ ಅವರ ಎನ್‌ಜಿಕೆ ದೊಡ್ಡ ಹಿಟ್ ಆಗುತ್ತದೆ ಎಂದು ಕಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.