Cinema News

ತಲೈವ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ

Published

on

ಇತ್ತೀಚೆಗಷ್ಟೇ ತಿರುಪತಿಯಲ್ಲಿ ನಿರ್ದೇಶಕ ವಿಘ್ನೇಶ್ ಜೊತೆ ಹಸೆ ಮಣೆ ಏರಿದ್ದ ನಟಿ ನಯನತಾರಾ ಮದುವೆ ಆದ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಿದ್ದಾರೆ. ಮದುವೆಯಾದ ಮರುದಿನವೇ ತಿಮ್ಮಪ್ಪನ ಸನ್ನಿದಿಗೆ ಭೇಟಿ ನೀಡಿ ವಿವಾದ ಸೃಷ್ಟಿಸಿದ್ದ ನಟಿ ಬಳಿಕ ಹನಿಮೂನ್ ನಲ್ಲಿ ಎಂಜಾಯ್ ಮಾಡಿಕೊಂಡು ಬಂದು ಸುದ್ದಿಯಾಗಿದ್ರು. ಇದೀಗ ಮನೆಯ ವಿಷಯಕ್ಕೆ ನಯನತಾರಾ ಹಾಗೂ ವಿಘ್ನೇಶ್ ಮತ್ತೆ ಸುದ್ದಿಯಾಗಿದ್ದಾರೆ.
ಈಗಾಗ್ಲೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಹೆಸರಿನಲ್ಲಿ ಸಾಕಷ್ಟು ಆಸ್ತಿ ಪಾಸ್ತಿಗಳಿವೆ. ಮದುವೆಯ ಬಳಿಕ ಈ ಜೋಡಿ ಹಕ್ಕಿಗಳು ಹೊಸ ಮನೆ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಅಂದ್ಹಾಗೆ ವಿಘ್ನೇಶ್ ಹಾಗೂ ಶಿವನ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ವಾಸವಿರು ಮನೆಯ ಪಕ್ಕದಲ್ಲೇ ಮನೆ ಖರೀದಿಸುತ್ತಿದ್ದಾರಂತೆ.

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳನ್ನ ನೋಡಿಕೊಂಡು ಬೆಳೆದ ನಯನತಾರಾಗೆ ರಜನಿಕಾಂತ್ ಎಂದರೆ ಸಾಕಷ್ಟು ಅಚ್ಚುಮೆಚ್ಚು. ಈಗಾಗ್ಲೆ ನಯನತಾರಾ ಹಾಗೂ ರಜನಿಕಾಂತ್ ಜೋಡಿಯಾಗಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಲೈವನ ಮನೆ ಪಕ್ಕದಲ್ಲೇ ಮನೆ ಖರೀದಿಸ್ತಿರೋದ್ರಿಂದ ಲೇಡಿ ಸೂಪರ್ ಸ್ಟಾರ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಮದುವೆಯ ಬಳಿಕ ವಿಘ್ನೇಶ್ ಪ್ರೀತಿಯ ಪತ್ನಿ ನಯನತಾರಾಗೆ ಕೊಡತ್ತಿರುವ ದುಬಾರಿ ಮೊತ್ತದ ಉಡುಗೊರೆ ಇದು ಅನ್ನೋದು ವಿಶೇಷ.

Spread the love
Click to comment

Copyright © 2019 PopcornKannada.com