Cinema News

ನಯನತಾರಾ-ವಿಘ್ನೇಶ್ ಉಳಿದುಕೊಳ್ಳುವ ಹೋಟೆಲ್ ಬೆಲೆ ಎಷ್ಟು ಗೊತ್ತಾ? ಒಂದು ದಿನಕ್ಕೆ ಇಷ್ಟೊಂದಾ?

Published

on

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಗ್ರ್ಯಾಂಡ್ ಶೆರಾಟನ್ ನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಮದುವೆ ಬಳಿಕ ತಿಮ್ಮಪ್ಪನ ಸನ್ನಿದಿಗೆ ಭೇಟಿ ನೀಡಿದ್ದ ಜೋಡಿಗಳು ಬಳಿಕ ಕೆಲ ದಿನಗಳ ಕಾಲ ನಯನತಾರಾ ತಾಯಿ ಮನೆಯಲ್ಲಿ ಕಳೆದಿದ್ದರು. ಇದೀಗ ಈ ಜೋಡಿ ಹಕ್ಕಿಗಳು ಹನಿಮೂನ್ ಎಂಜಾಯ್ ಮಾಡುತ್ತಿದ್ದು ಇವರು ಹನಿಮೂನ್ ಗೆ ಖರ್ಚು ಮಾಡುತ್ತಿರುವ ಮೊತ್ತ ಕೇಳಿದರೆ ನೀವು ದಂಗಾಗುತ್ತಿರಿ.
ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಗಳು ಇದೇ ತಿಂಗಳ 9ರಂದು ಹಿರಿಯರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ದರು. ನಯನತಾರಾ ಹಾಗೂ ವಿಘ್ನೇಶ್ ಮದುವೆಗೆ ರಜನಿಕಾಂತ್, ಮಣಿರತ್ನಂ ಶಾರುಖ್ ಖಾನ್ ಸೇರಿದಂತೆ ಸಾಕಷ್ಟು ಮಂದಿ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು.

 

 

 

ಇದುವರೆಗೂ ನಯನತಾರಾ ಹಾಗೂ ವಿಘ್ನೇಶ್ ಮದುವೆಯ ಕೆಲವೇ ಕೆಲವು ಫೋಟೋಗಳು ಮಾತ್ರವೇ ಜೋಡಿಗಳು ಹಂಚಿಕೊಂಡಿದ್ದಾರೆ. ಇವರ ಮದುವೆಯ ವಿಡಿಯೋವನ್ನು ನೆಟ್ ಫ್ಲಿಕ್ಸ್ ಎರಡು ಭಾಗಗಳಲ್ಲಿ ಪ್ರಸಾರ ಮಾಡಲಿದ್ದು ಇದೇ ಕಾರಣಕ್ಕೆ ಹೆಚ್ಚಿನ ಫೋಟೋ ಅಥವಾ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಗೌತಮ್ ಮೆನನ್ ಮಾಲೀಕತ್ವದ ಕಂಪನಿ ಮತ್ತು ಅವರ ತಾಂತ್ರಿಕ ಘಟಕವು ಮದುವೆಯ ಚಿತ್ರೀಕರಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಸದ್ಯ ಜೋಡಿ ಹಕ್ಕಿಗಳು ಹನಿಮೂನ್ ಗಾಗಿ ಥಾಯ್ಲೆಂಡ್ ಗೆ ತೆರಳಿದ್ದು ಬ್ಯಾಂಕಾಕ್ ನ ಚಾವೊಫ್ರೇಯಾ ನದಿಯ ದಡದಲ್ಲಿರುವ ಪ್ರತಿಷ್ಠಿತ ಸಿಯಾಮ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಈ ಹೋಟೆಲ್ ನಲ್ಲಿ ಒಂದು ರಾತ್ರಿ ತಂಗಿದರೆ 2ಲಕ್ಷಕ್ಕೂ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಆದರೆ ಇದನ್ನು ಸೆಲೆಬ್ರಿಟಿ ಜೋಡಿಗಳಿಗೆ ಉಚಿತವಾಗಿ ನೀಡಲಾಗಿದೆ.

Spread the love
Click to comment

Copyright © 2019 PopcornKannada.com