Cinema News
ಆಗಸ್ಟ್ 23ಕ್ಕೆ ‘ನನ್ನ ಪ್ರಕಾರ’ ಬಿಡುಗಡೆ
ರಾಷ್ಟ್ರ ಪ್ರಶಸ್ತಿ ವಿಜೇತೆ ಪಂಚಭಾಷ ತಾರೆ ಪ್ರಿಯಾಮಣಿ, ಪೋಲಿಸ್ ಪಾತ್ರದಲ್ಲಿ ಕಿಶೋರ್, ಮಯೂರಿ ನಟಿಸಿರುವ “ನನ್ನ ಪ್ರಕಾರ” ಚಿತ್ರವು ಆಗಸ್ಟ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗಷ್ಟೆ ಸೆನ್ಸಾರ್ ಮುಗಿಸಿಕೊಂಡ ಚಿತ್ರಕ್ಕೆ “ಯು/ಎ” ಸರ್ಟಿಫಿಕೇಟ್ ದೊರೆತಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದು ಸದ್ದು ಮಾಡಿದೆ. ಕೆಲವು ದಿನಗಳ ಹಿಂದೆ ಚಿತ್ರದ ಮೊದಲ ಹಾಡು ಅನುರಾಧಾ ಭಟ್ ಧ್ವನಿಯಲ್ಲಿ “ಹೂ ನಗೆ ಆಮಂತ್ರಿಸಿದೆ” ಬಿಡುಗಡೆಯಾಗಿ ಸಿನಿ ರಸಿಕರ ಗಮನ ಸೆಳೆದಿದೆ.
ಚಿತ್ರಕ್ಕೆ ವಿನಯ್ ಬಾಲಾಜಿ ರವರ ಚೊಚ್ಚಲ ನಿರ್ದೇಶನ, ಅರ್ಜುನ್ ರಾಮ್ ರವರ ಸಂಗೀತ, ಜಿವಿಕೆ ಕಂಬೈನ್ಸ್ ಮತ್ತು ಗುರುರಾಜ್ ರವರ ನಿರ್ಮಾಣವಿದೆ.
ಸದ್ಯಕ್ಕೆ ಪ್ರಮೋಷನ್ಸ್ ರಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ಚಿತ್ರವನ್ನು ಇದೇ ಆಗಸ್ಟ್ 23 ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.