Cinema News

ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿತು “ದೈಜಿ” ಚಿತ್ರದ ಮುಹೂರ್ತ .

Published

on

“ದೈಜಿ” ಚಿತ್ರದ ಮುಹೂರ್ತ ಭಾನುವಾರದ ಬೆಳಗಿನ ಸುಮುಹೂರ್ತದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಚಿತ್ರವು ಡಾಕ್ಟರ್ ರಮೇಶ ಅರವಿಂದ್ ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಇದು . ಈ ಚಿತ್ರದ ನಿರ್ಮಾಪಕರು ವಿಭಾ ಕಶ್ಯಪ್ ಎಂಬ ಸಂಸ್ಥೆ ಅದರ ಮುಖ್ಯಸ್ಥರಾದ ರವಿಕಶ್ಯಪ್ ರವರು ,

ಇದರ ನಿರ್ದೇಶಕರು ಆಕಾಶ್ ಶ್ರೀವತ್ಸ ರವರು ಈ ಹಿಂದೆ ಶಿವಾಜಿ ಸೂರತ್ಕಲ್ ಭಾಗ-1 ಮತ್ತು ಶಿವಾಜಿ ಸೂರತ್ಕಲ್ ಭಾಗ 2 ನ್ನು ಸರಣಿಯಾಗಿ ನಿರ್ದೇಶಿಸಿದ್ದು , ಡಾಕ್ಟರ್ ರಮೇಶ್ ಅರವಿಂದ್ ರವರು ಮತ್ತು ಆಕಾಶ್ ಶ್ರೀವತ್ಸ ರವರ ನಿರ್ದೇಶನದ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವಂತಹ ಮೂರನೇ ಚಿತ್ರವಾಗಿದ್ದು


ಈ ಚಿತ್ರದ ನಾಯಕ ನಟಿಯಾಗಿ ನಟಿಸುತ್ತಿರುವುದು ರಾಧಿಕಾ ನಾರಾಯಣ್ ಈ ಮುಂಚೆಯೂ ಸಹ ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಈ ಚಿತ್ರಕ್ಕೆ ಛಾಯಾಗ್ರಾಹಣ ಮಾಡುತ್ತಿರುವುದು ಶ್ರೀಶ ಕುದುವಳ್ಳಿ ರವರು ಈ ಹಿಂದೆ ಇವರು ಯಜಮಾನ , ಯುವ ಖ್ಯಾತಿಯ ಛಾಯಾಗ್ರಾಹಕರಾಗಿದ್ದಾರೆ ಈ ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿ ವಿದೇಶದಲ್ಲಿ ಪ್ರಾರಂಭವಾಗಲಿದೆ

Spread the love
Click to comment

Copyright © 2019 PopcornKannada.com