Cinema News
ಮೊದಲ ಶೆಡ್ಯೂಲ್ ಮುಗಿಸಿದ ತಮಿಳಿನ ‘ಮಫ್ತಿ’ – PopcornKannada.com
ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಮತ್ತು ಶ್ರೀಮುರುಳಿ ನಟನೆಯ ಮಫ್ತಿ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿರುವ ವಿಚಾರ ಗೊತ್ತಿದೆ. ಈಗ ಆ ಸಿನಿಮಾದ ಮೊದಲ ಶೆಡ್ಯೂಲ್ ಕಂಪ್ಲೀಟ್ ಆಗಿದೆ.
ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್ ಅವರೇ ತಮಿಳಿನಲ್ಲೂ ಅಕ್ಷ್ಯನ್ ಕಟ್ ಹೇಳುತ್ತಿದ್ದಾರೆ. ಕನ್ನಡದಲ್ಲಿ ಶಿವರಾಜ್‌ಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ಸಿಂಬು ಮಾಡುತ್ತಿದ್ದಾರೆ. ಶ್ರೀಮುರುಳಿ ಪಾತ್ರದಲ್ಲಿ ಗೌತಮ್ ಕಾರ್ತಿಕ್ ನಟಿಸುತ್ತಿದ್ದಾರೆ..
 
ಮೊದಲ ಶೆಡ್ಯೂಲ್ ಮುಗಿದಿರುವ ಬಗ್ಗೆ ನಟ ಗೌತಮ್ ಕಾರ್ತಿಕ್ ಟ್ವೀಟ್ ಮಾಡಿದ್ದು, ಮೊದಲ ಶೆಡ್ಯೂಲ್ ಕಂಪ್ಲೀಟ್ ಆಗಿರುವುದಕ್ಕೆ ಬಹಳ ಖುಷಿಯಾಗಿದೆ ಎಂದಿದ್ದಾರೆ. ಇನ್ನು ಮೊದಲ ಶೆಡ್ಯೂಲ್ ಬಳ್ಳಾರಿಯಲ್ಲಿ ನಡೆದಿದೆಯಂತೆ.