Cinema News
ಕೆಜಿಎಫ್ – 2 ಶೂಟಿಂಗ್ ಆರಂಭ
2018ರಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಸಿಕ್ವೇಲ್ ಶೂಟಿಂಗ್ ಸೋಮವಾರದಿಂದ ಆರಂಭವಾಗಿದೆ.
ಕೆಜಿಎಫ್ -2 ಚಿತ್ರಕ್ಕಾಗಿ ನಟ ಯಶ್ ರೆಡಿಯಾಗಿದ್ದು, ಸೋಮವಾರದಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದಷ್ಟು ದಿನ ಚಿತ್ರೀಕರಣ ಮುಗಿಸಿ ನಂತರ ಮಲ್ಪೆ, ಮಂಗಳೂರು, ಉಡುಪಿಯಲ್ಲಿ ಶೂಟಿಂಗ್ ಮುಂದುವರೆಸಲಿದ್ದಾರೆ. ಸಿನಿಮಾಟೋಗ್ರಫರ್ ಭುವನ್ ಗೌಡ ಮತ್ತು ಪ್ರಶಾಂತ್ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಒಟ್ಟಿನಲ್ಲಿ 2020ರ ಆರಂಭದ ಹೊತ್ತಿಗೆ ಕೆಜಿಎಫ್-2 ಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಮಾತುಗಳು ಚಿತ್ರತಂಡದಿಂದ ಕೇಳಿಬರುತ್ತಿದೆ.