Movie Reviews

Mooka Jeeva Movie Review

Published

on

‘ಮೂಕ ಜೀವ’ ಸಿನಿಮಾ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಸಾರಲು ರೂಪಿಸಲಾಗಿದೆ. ಜೆ.ಎಂ. ಪ್ರಹ್ಲಾದ್ ಅವರ ಕಾದಂಬರಿಯನ್ನು ಆಧರಿಸಿದ ಈ ಕಥೆ, ಹಳ್ಳಿಯ ಬಡ ಕುಟುಂಬದ ವಿಶೇಷ ಚೇತನನೊಬ್ಬನ ಜೀವನದ ಸುತ್ತ ಸಾಗುತ್ತದೆ. ಅಂಗವೈಕಲ್ಯವು ಸ್ವಾವಲಂಬಿ ಜೀವನಕ್ಕೆ ತೊಂದರೆಯಾಗುವುದಿಲ್ಲ ಎಂಬ ಸಂದೇಶವನ್ನು ಚಿತ್ರವು ಸ್ಪಷ್ಟವಾಗಿ ಹೇಳುತ್ತದೆ. ಜೊತೆಗೆ, ಇಂತಹ ವಿಶೇಷ ಚೇತನ ವ್ಯಕ್ತಿಗಳನ್ನು ನಾವು ಹೇಗೆ ಮಾನ್ಯತೆ ನೀಡಬೇಕು ಮತ್ತು ಅವರನ್ನೆಲ್ಲಾ ನಿರ್ಲಕ್ಷಿಸಿದಾಗ ಏನಾಗಬಹುದು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ಈ ಕಥೆ ಕಲಾತ್ಮಕ ಶೈಲಿಯಲ್ಲಿ ಸಾಗುತ್ತಾ, ತಾಯಿ, ಮಗ, ಪ್ರೀತಿಯನ್ನು ಬೆನ್ನಟ್ಟಿದ ಹುಡುಗಿ, ಊರಿನ ಗೌಡ ಮತ್ತು ಅಲ್ಲಿನ ವಿವಿಧ ಸಮಸ್ಯೆಗಳ ಸುತ್ತ ಸುತ್ತುತ್ತದೆ. ಗಂಡಿಲ್ಲದೆ ಇಬ್ಬರು ಮಕ್ಕಳನ್ನು ಸಾಕುತ್ತಿರುವ ತಾಯಿ, ಜೀವನದ ಒತ್ತಡದಿಂದ ಊರನ್ನು ತೊರೆಯಬೇಕಾದಾಗ ಏನೆಲ್ಲಾ ಘಟನೆಗಳು ನಡೆಯುತ್ತವೆ, ಆಕೆಯ ಮಗನ ಭವಿಷ್ಯ ಏನು, ಊರಿಂದ ಓಡಿಹೋದ ಮಗಳು ಏನಾಗುತ್ತಾಳೆ ಎಂಬುದನ್ನು ಕಥೆಯು ತಾಳ್ಮೆಯಿಂದ ವಿವರಿಸುತ್ತದೆ.

ಶ್ರೀಹರ್ಷ, ಶ್ರೀಕಂಠನ ಪಾತ್ರದಲ್ಲಿ, ಬಿಗ್‌ಬಾಸ್ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ, ಮೇಘಾಶ್ರೀ ನಾಯಕಿಯಾಗಿ, ಹಾಗೂ ತಾಯಿಯ ಪಾತ್ರದಲ್ಲಿ ಅಪೂರ್ವಶ್ರೀ ತಮ್ಮ ಪ್ರದರ್ಶನದಿಂದ ಗಮನ ಸೆಳೆಯುತ್ತಾರೆ. ರಮೇಶ್ ಪಂಡಿತ್ ಊರಿನ ಯಜಮಾನನಾಗಿ ಪಾತ್ರಕ್ಕೆ ನ್ಯಾಯವನ್ನು ಒದಗಿಸುತ್ತಾರೆ. ಸಿನಿಮಾ ಜ್ಞಾನವನ್ನು ಮಾಧ್ಯಮವಾಗಿ ಪರಿಗಣಿಸುವವರಿಗೆ ‘ಮೂಕ ಜೀವ’ ಆಕರ್ಷಕವಾಗಿ ತಲುಪುವ ಚಿತ್ರವಾಗಿದೆ.

Rating – 3/5.

Spread the love
Click to comment

Copyright © 2019 PopcornKannada.com