Cinema News
ಮಿಷನ್ ಮಂಗಲ್‌ನಲ್ಲಿ ಕರ್ನಾಟಕ ವಿಧಾನಸೌಧ & ಹಾಸನ
ಅಕ್ಷಯ್‌ಕುಮಾರ್ ನಟನೆಯ ಮಿಷನ್ ಮಂಗಲ್ ಸಿನಿಮಾ ಟ್ರೇಲರ್ ಬಿಡುಗಡೆಯಾಗಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಸಿನಿಮಾಗೂ ಮತ್ತು ಕರ್ನಾಟಕಕ್ಕೂ ನಿಕಟ ಸಂಬಂಧವಿದೆ.
ಹೌದು, ಹಿಂದಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಮಿಷನ್ ಮಂಗಲ್‌ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದರೆ, ಈ ಚಿತ್ರದ ಕೆಲ ದೃಶ್ಯಗಳನ್ನು ಕರ್ನಾಟಕ ಅದರಲ್ಲೂ ಬೆಂಗಳೂರಿನ ಆನಂದ್‌ರಾವ್ ಸರ್ಕಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಜತೆಗೆ ವಿಧಾನ ಸೌಧವನ್ನು ಸಹ ಕೆಲ ಶಾಟ್‌ಗಳಲ್ಲಿ ಬಳಸಿದ್ದಾರೆ. ಇದರ ಜತೆಯಲ್ಲಿ ಸಿನಿಮಾದಲ್ಲಿ ಹಾಸನ ಇಸ್ರೋ ಕಚೇರಿಯನ್ನು ರಿಕ್ರಿಯೇಟ್ ಮಾಡಲಾಗಿದೆ. ಮಿಷನ್ ಮಂಗಲ್ ಸಿನಿಮಾದಲ್ಲಿ ಮಂಗಳ ಗ್ರಹಕ್ಕೆ ಉಪಗ್ರಹವನ್ನು ಉಡಾವಣೆ ಮಾಡುವ ಕಥೆಯನ್ನು ಹೊಂದಿದೆ.
ಈ ಮಂಗಳ ಗ್ರಹದ ಉಡಾವಣೆಯಲ್ಲಿ ಹಾಸನ ಪ್ರಮುಖ ಕೇಂದ್ರವಾಗಿತ್ತು.ಹಾಗಾಗಿ ಅದನ್ನು ಹಾಗೆ ಕ್ರಿಯೇಟ್ . ಇದೆಲ್ಲದರ ಜತೆಗೆ ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ದತ್ತಣ್ಣ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇದರ ವಿಶೇಷವಾಗಿದೆ. ಜತೆಗೆ ಇವರು ಕನ್ನಡದಲ್ಲಿಯೂ ಮಾತನಾಡುತ್ತಾರಂತೆ . ಜತೆಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿರುವ ಜಗನ್ ಶಕ್ತಿ ಮೂಲತಃ ಬೆಂಗಳೂರಿನವರು ಎಂಬುದು ಮತ್ತೊಂದು ಆಸಕ್ತಿಕಾರಕ ವಿಷಯವಾಗಿದೆ.
ಒಟ್ಟಿನಲ್ಲಿ ಮಿಷನ್ ಮಂಗಲ್ ಸಿನಿಮಾಗೂ ಕರ್ನಾಟಕಕ್ಕೂ ಹೆಚ್ಚಿನ ಸಂಬಂಧವಿದೆ ಹಾಗಾಗಿ ಬಾಲಿವುಡ್‌ನಂತೆ ಕರ್ನಾಟಕದಲ್ಲಿಯೂ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.