Cinema News
ರಾಬರ್ಟ್‌ಗೆ ಜೋಡಿಯಾಗ್ತಾರ ಮೆಹ್ರನ್ ಕೌರ್?
ತೆಲಗಿನ ‘ಎಫ್2’ ಮತ್ತು ‘ನೋಟಾ’ ಸಿನಿಮಾಗಳಲ್ಲಿ ನಟಿಸಿದ್ದ ಮೆಹ್ರನ್ ಕೌರ್ ಈಗ ರಾಬರ್ಟ್‌ಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಅತಿಯಾದಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದರ್ಶನ್ ಈ ಸಿನಿಮಾಗಾಗಿ ಗಡ್ಡ ಬಿಟ್ಟು ವಿಶಿಷ್ಟ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.
ಮೊನ್ನೆ ರಂಜಾನ್ ದಿನ ಬಿಡುಗಡೆಯಾದ ಒಂದೇ ಒಂದು ಪೋಸ್ಟರ್‌ಗೆ ಇಡೀ ಸ್ಯಾಂಡಲ್‌ವುಡ್ ಬೆಚ್ಚಿ ಬಿದ್ದಿದೆ. ಇಂತಹ ಸಿನಿಮಾಗೆ ನಾಯಕಿ ಯಾರಾಗುತ್ತಾರೆ ಎಂಬುದೇ ಎಲ್ಲರಿಗೂ ಕುತೂಹಲ ಇದೆ.
ಇಂತಹ ಸಮಯದಲ್ಲಿ ನಿರ್ದೇಶಕ ಮೆಹ್ರನ್ ಕೌರ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿಗಳು ರಾಬರ್ಟ್ ಸಿನಿಮಾ ಅಂಗಳದಿಂದ ಕೇಳಿ ಬರುತ್ತಿವೆ. ಆದರೆ ಇದನ್ನು ನಿರ್ದೇಶಕರಾಗಲಿ, ಚಿತ್ರತಂಡವಾಗಲಿ ಕನ್ಫರ್ಮ್ ಮಾಡುತ್ತಿಲ್ಲ.
ವಿಶೇಷ ಎಂದರೆ ಈ ಸಿನಿಮಾದಲ್ಲಿ ಜಗಪತಿ ಬಾಬು ಖಳ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ