Cinema News

ಬ್ಯೂಟಿಫುಲ್ ಹುಡುಗಿಗಾಗಿ ಹಾಡಿದ ಮೇಘನಾ ರಾಜ್

Published

on

ಪತಿ ಚಿರಂಜೀವಿ ಸರ್ಜಾ ನಟನೆಯ ಸಿಂಗ ಸಿನಿಮಾದ ಬ್ಯೂಟಿಫುಲ್ಲು ಹುಡುಗಿ ಸಿವ ಸಿವಾ ಹಾಡಿಗೆ ಮೇಘನಾ ರಾಜ್‌ ಧ್ವನಿಯಾಗಿದ್ದಾರೆ.

 

ಈಗಾಗಲೇ ತನ್ನ ಹಾಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ನಂ 1 ಸ್ಥಾನದಲ್ಲಿರುವ ಸಿಂಗ ಸಿನಿಮಾ ಈಗ ಹೊಡ ವಿಡಿಯೋ ಹಾಡಿನ ಮೂಲಕ ಮತ್ತೊಮ್ಮೆ ದಾಖಲೆ ಮಾಡುತ್ತಿದೆ. ಧರ್ಮವಿಶ್‌ ಸಂಗೀತ ನಿರ್ದೇಶನ ಮಾಡಿರುವ ಈ ಸಿನಿಮಾದ ಶ್ಯಾನೆ ಟಾಪಾಗವ್ಳೆ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಮಾಡಿರುವ ಹವಾ ಜೋರಾಗಿರುವ ಹಂತದಲ್ಲಿಯೇ ಈಗ ಬ್ಯೂಟಿಫುಲ್‌ ಹುಡುಗಿ ಸಿವ ಸಿವಾ ಕೂಡಾ ಹಿಟ್‌ ಆಗುತ್ತಿದೆ.

 

 

 

ಈ ಹಾಡನ್ನು ಚಿರಂಜೀವಿ ಸರ್ಜಾ ಪತ್ನಿ ಮತ್ತು ನಟಿ ಮೇಘನಾ ರಾಜ್‌ ಹಾಡಿರುವುದು ವಿಶೇಷವಾಗಿದೆ. ಇವರ ಜತೆ ನವೀನ್‌ ಸಜ್ಜು ಸಹ ಹಾಡಿದ್ದಾರೆ. ಈ ಹಾಡಿನಲ್ಲಿ ನಟಿ ಆಧಿತಿ ಪ್ರಭುದೇವ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡು ವೈರಲ್‌ ಆಗಿದೆ.

 

 

 

 

Spread the love
Click to comment

Copyright © 2019 PopcornKannada.com