Cinema News

ಮಾಸಾಂತ್ಯಕ್ಕೆ ಆರಂಭವಾಗಲಿದೆ ಮನಮಿಡಿಯುವ ಚಿತ್ರ. ನಾಯಕನ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ಚಿತ್ರತಂಡ.

Published

on

ನಿಯತ್ತಿನಲ್ಲಿ ನಾಯಿಗೆ ಸಮವಾದ ಪ್ರಾಣಿ ಇಲ್ಲ ಎನ್ನುತ್ತಾರೆ. ಸಾಕಿದ ಯಜಮಾನನ ಮೇಲೆ‌ ಆ ಪ್ರಾಣಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಪುಟ್ಟ ಮಕ್ಕಳಿಗಂತೂ ನಾಯಿ ಅಂದರೆ ಪ್ರಾಣ.

ಇಂತಹದೊಂದು ಅದ್ಭುತ ಕಥೆಯುಳ್ಳ ನೂತನ ಚಿತ್ರವೊಂದು ಪ್ರೊಡಕ್ಷನ್ಸ್ ನಂ 2 ಹೆಸರಿನಲ್ಲಿ ಆರಂಭವಾಗಲಿದೆ. ಅಂಗವೈಕಲ್ಯವಿರುವ ಬಾಲಕಿ ಹಾಗೂ ನಾಯಿಯೊಂದರ ನಡುವಿನ ಮಧುರ ಬಾಂಧವ್ಯದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.

ಮಾಧವ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ ಈ ಚಿತ್ರದ ನಾಯಕಿ.

ಇತ್ತೀಚೆಗೆ ನಾಯಕ ಮಾಧವ ಅವರ ಹುಟ್ಟುಹಬ್ಬ ನಡೆದಿತ್ತು. ಆ ಸಂದರ್ಭದಲ್ಲಿ ನಾಯಕ ಮಾಧವ ಅವರಿಗೆ ಶುಭಕೋರುವ ಪೋಸ್ಟರ್ ಸಹ ಬಿಡುಗಡೆಯಾಗಿದೆ.

 

 

 

 

ಶರಣಪ್ಪ ಗೌರಮ್ಮ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತ ಸಾಹಿತಿ ಗೌಸ್ ಫಿರ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರವನ್ನು ಕೂಡ ಶರಣಪ್ಪ ಗೌರಮ್ಮ ಅವರು ಪಾಲುದಾರಿಕೆಯಲ್ಲಿ ನಿರ್ಮಿಸುತ್ತಿದ್ದಾರೆ. ಇದು ಅವರ ನಿರ್ಮಾಣದ ಎರಡನೇ ಚಿತ್ರ.

ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಿರ್ಮಾಪಕ ಶರಣಪ್ಪ ಗೌರಮ್ಮ ಅವರಿಗೆ ಸಿನಿರಂಗ ಹೊಸತು.

ನಿರ್ಮಾಪಕ ಶರಣಪ್ಪ ಅವರ ಪುತ್ರಿ ಬೇಬಿ ಪ್ರಕೃತಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ಈಕೆ ಕೂಡ ಕಿಕ್ ಬಾಕ್ಸಿಂಗ್ ನಲ್ಲಿ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು‌ ಮಾಡಿದ್ದಾರೆ. ಅಂಗವೈಕಲ್ಯವಿರುವ ಹುಡುಗಿಯಾಗಿ ಪ್ರಕೃತಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಮುಖ್ಯಪಾತ್ರದಲ್ಲಿ ರಾಕಿ(ನಾಯಿ) ಕೂಡ ಅಭಿನಯಿಸಲಿದೆ.

 

 

 

 

ವಿಶ್ವಾಸ್ ಕೃಷ್ಣ ಈ‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರಿಗೆ ಚೊಚ್ಚಲ ಚಿತ್ರ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡುತ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದೇ ತಿಂಗಳ ಕೊನೆಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. ಶಿವಮೊಗ್ಗ ಹಾಗೂ ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ‌.

Spread the love
Click to comment

Copyright © 2019 PopcornKannada.com