Cinema News

ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧನಿದ್ದೇನೆ, ಯಾರಾದರೂ ಒಳ್ಳೆಯ ಕಥೆ ಹೇಳಿ ಎಂದ ಮಲಯಾಳಂ ನಟ ಪೃಥ್ವಿರಾಜ್

Published

on

ಮಲಯಾಳಂ ನಟ ಪೃಥ್ವಿರಾಜ್, ವಿವೇಕ್ ಒಬೆರಾಯ್ ನಟನೆಯ ‘ಕಡುವ’ ಸಿನಿಮಾ ಜೂ.30ರಂದು ಕನ್ನಡ, ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತೆರೆಗೆ ಬರ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು ಚಿತ್ರದ ನಟ ಪೃಥ್ವಿರಾಜ್ ಹಾಗೂ ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಪೃಥ್ವಿರಾಜ್ ‘ಕೇರಳದಲ್ಲಿ ನಾನು ಕನ್ನಡ ಸಿನಿಮಾಗಳ ಅನಧಿಕೃತ ರಾಯಭಾರಿ ಆಗಿದ್ದೇನೆ. ಕೆಜಿಎಫ್ ಮತ್ತು 777 ಚಾರ್ಲಿ ಸಿನಿಮಾಗಳನ್ನು ಕೇರಳದಲ್ಲಿ ಪ್ರದರ್ಶಿಸಿದ್ದೇನೆ. ಆ ಎರಡು ಸಿನಿಮಾಗಳು ನನಗೆ ಒಳ್ಳೆಯ ಗಳಿಕೆ ನೀಡಿವೆ ಎಂದರು.
ಕನ್ನಡದಲ್ಲಿ ನನಗೆ ತುಂಬಾ ಜನ ಸ್ನೇಹಿತರಿದ್ದಾರೆ. ಎಲ್ಲರಿಗಿಂತ ಮೊದಲು ನಾನು ಭೇಟಿ ಮಾಡಿದ್ದು ಶಿವರಾಜ್ ಕುಮಾರ್ ಅವರನ್ನು. ಸೂಪರ್ಸ್ಟಾರ್ ಆಗಿದ್ದೂ ವಿನಯವಂತರಾಗಿರುವುದು ಹೇಗೆ ಎಂಬುದು ಅವರಿಂದ ಕಲಿಯಬೇಕು ಎಂದು ಹೇಳಿದರು.’
ರಕ್ಷಿತ್ ಶೆಟ್ಟಿ ಸಿನಿಮಾಗಳು ನನಗೆ ಇಷ್ಟ. ಅವರು ಮಲಯಾಳಂ ಹೀರೋ ಹಾಕಿಕೊಂಡು ಸಿನಿಮಾ ನಿರ್ದೇಶನ ಮಾಡುವುದಾದರೆ ನಾನು ಆ ಸಿನಿಮಾದ ಆಡಿಷನ್ಗೆ ಹೋಗುತ್ತೇನೆ. ನಾನು ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ದನಿದ್ದು ಯಾರಾದರೂ ನನಗೆ ಒಳ್ಳೆಯ ಕಥೆ ಹೇಳಿ ಎಂದು ನಟ ಪೃಥ್ವಿರಾಜ್ ಹೇಳಿದ್ದಾರೆ.

Spread the love
Click to comment

Copyright © 2019 PopcornKannada.com