Cinema News
ಓಟಿಟಿಗೆ ಲಗ್ಗೆಯಿಟ್ಟ ‘ಲವ್ ಯೂ ಮುದ್ದು’
‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ನಿರ್ದೇಶಕ ಕುಮಾರ್ ‘ಲವ್ ಯೂ ಮುದ್ದು’ ಎಂಬ ಅಪರೂಪದ ಲವ್ ಸ್ಟೋರಿಯನ್ನು ಇತ್ತೀಚೆಗೆ ಬೆಳ್ಳಿ ಪರದೆ ಮೇಲೆ ಪ್ರದರ್ಶಿಸಿದ್ದರು. ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಕಂಡ ‘ಲವ್ ಯೂ ಮುದ್ದು’, ಇದೀಗ ಓಟಿಟಿಗೆ ಲಗ್ಗೆಯಿಟ್ಟಿದೆ. ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮಕಥೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇಂಥ ಅಪರೂಪದ ಪ್ರೇಮ್ ಕಹಾನಿ ಇದೀಗ ಅಮೇಜಾನ್ ಪ್ರೈಮ್ ನಲ್ಲಿ ಪ್ರದರ್ಶನಕ್ಕೆ ಲಭ್ಯವಿದೆ.
ಲವ್ ಯೂ ಮುದ್ದು ಸಿನಿಮಾದಲ್ಲಿ ನಾಯಕನಾಗಿ ಸಿದ್ದು ನಟಿಸಿದ್ದು, ನವನಟಿ ರೇಷ್ಮಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ತಬಲಾ ನಾಣಿ, ಶ್ರೀವತ್ಸ, ಅಪೂರ್ವ ಹಾಗೂ ಉಷಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಕಾರ್ಕಳ, ಕುಮಟಾ, ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿರುವ ಈ ಚಿತ್ರ, ಪ್ರೇಮಿಗಳನ್ನು ಆಕರ್ಷಿಸಿತ್ತು. ಕಿಶನ್ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಕಿಶನ್ ಟಿ.ಎನ್ ಲವ್ ಯೂ ಮುದ್ದು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ.ಎಸ್ ಸಾಥ್ ಕೊಟ್ಟಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಸಂಗೀತ ಸಂಯೋಜನೆ ಹಾಗೂ ಸಿ.ಎಸ್.ದೀಪು ಸಂಕಲನ ಈ ಚಿತ್ರಕ್ಕಿದೆ.