Cinema News

’ಲೈಗರ್’ ಸಿನಿಮಾ ಬೆಳ್ಳಿತೆರೆಯಲ್ಲಿ ರಾಕ್ ಮಾಡಲು ಸಜ್ಜಾದ ವಿಶ್….ಖಡಕ್ ಖಳನಾಯಕನಾಗಿ ಈ ವಾರ ತೆರೆಗೆ ಬರ್ತಿದ್ದಾರೆ ಯಂಗ್ ಹೀರೋ

Published

on

ತೆಲುಗು ಚಿತ್ರರಂಗದ ಡ್ಯಾಶಿಂಗ್ ಡೈರೆಕ್ಟರ್ ಹಾಗೂ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಮ್ಮಿಲನದ ಲೈಗರ್ ಸಿನಿಮಾ ರಿಲೀಸ್ ಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಬಿಡುಗಡೆಗೂ ಮೊದಲ ಬೇಜಾನ್ ಟಾಕ್ ಕ್ರಿಯೇಟ್ ಮಾಡಿರುವ ಲೈಗರ್ ಸಿನಿಮಾ ಮೂಲಕ ಖಡಕ್ ಖಳನಾಯಕರೊಬ್ಬರು ಬೆಳ್ಳಿತೆರೆಯಲ್ಲಿ ಬ್ಯಾಂಗ್ ಮಾಡಲು ಸಜ್ಜಾಗಿದ್ದಾರೆ. ಅವ್ರೇ ಮಾಡೆಲ್ ಕಂ ಆಕ್ಟರ್ ವಿಶ್..

 

 

12 ವರ್ಷದ ಹೋರಾಟ ಅಂತೂ ವಿಶ್ ಸಿನಿಮಾ ಕನಸು ಲೈಗರ್ ಮೂಲಕ ನನಸಾಗ್ತಿದೆ. ಮಾಡೆಲ್ ನಿಂದ ವೃತ್ತಿ ಬದುಕು ಆರಂಭಿಸಿ ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಆ ನಂತರ ಪುರಿ ಕೆನೆಕ್ಟ್ಸ್ ಪ್ರೊಡಕ್ಷನ್ ನಡಿ ಸಿಇಒ ಆಗಿ ಕೆಲಸ ಮಾಡಿರುವ ವಿಶ್, ಯಾವುದೇ ಗಾಡ್ ಫಾದರ್ ಇಲ್ಲದೇ ಝೀರೋನಿಂದ ಬದುಕು ಶುರುಮಾಡಿ ಈಗ ಬೆಳ್ಳಿತೆರೆಯಲ್ಲಿ ಮಿನುಗಲು ಸಜ್ಜಾಗಿದ್ದಾರೆ.

 

 

 

ಯಂಗ್ ಅಂಡ್ ವರ್ಸಟೈಲ್ ಆಕ್ಟರ್ ವಿಶ್, ಲೈಗರ್ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದು, ನನ್ನ ಕನಸು ಸಹಕಾರಗೊಳ್ಳಲು ನಿರ್ದೇಶಕ ಪುರಿ ಜಗನ್ನಾಥ್ ಕಾರಣ. ಅವರು ನನಗೆ ಗುರು, ಬೆಸ್ಟ್ ಫ್ರೆಂಡ್, ಮೆಂಟರ್ ಅಂತಾ ಹೇಳಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ವಿಶ್, ಬಡ್ಡೀಸ್ ಪಾತ್ರದ ಮೂಲಕ ಹಂಗಾಮ ಸೃಷ್ಟಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿ ಪ್ಯಾನ್ ಇಂಡಿಯಾ ದಿಬ್ಬಣ ಹೊರಡಲಿರುವ ಅವರು, ಬಾಲಿವುಡ್ ಅಂಗಳಕ್ಕೂ ಲೈಗರ್ ಮೂಲಕ ಪಾದಾರ್ಪಣೆ ಮಾಡ್ತಿದ್ದಾರೆ. ಇದೇ ಆಗಸ್ಟ್ 25ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಲೈಗರ್ ಬಿಗ್ ಸ್ಕ್ರೀನ್ ಗೆ ಅಪ್ಪಳಿಸ್ತಿದ್ದು, ಬಾಕ್ಸಿಂಗ್ ರಿಂಗ್ ನಲ್ಲಿ ವಿಜಯ್ ವರ್ಸಸ್ ವಿಶ್ ಜುಗಲ್ ಬಂಧಿ ನೋಡೋದಿಕ್ಕೆ ಚಿತ್ರಪ್ರೇಮಿಗಳು ಎಕ್ಸೈಟ್ ಆಗಿದ್ದಾರೆ.

 

Spread the love
Click to comment

Copyright © 2019 PopcornKannada.com