Cinema News

ಕಿರಣ್ ರಾಜ್ – ಕ್ರಿಸ್ ಜೋಡಿಯ ಮಾಸ್ ಎಂಟರ್ಟೈನರ್ ‘ಶೇರ್’ ಮೇ 15ಕ್ಕೆ ಬಿಡುಗಡೆ

Published

on

ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾಗಳಿಗೆ ವಿಶೇಷ ಸ್ಥಾನಮಾನವಿದ್ದು, ಅದೇ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ ‘ಶೇರ್’ ಸಿನಿಮಾ. ಕಿರಣ್ ರಾಜ್ ಹಾಗೂ ಕ್ರಿಸ್(ಗಿಲ್ಲಿ) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರ ಇದೇ ವಾರ, ಮೇ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್ ಹಾಗೂ ಪ್ರಚಾರದ ಮೂಲಕ ಸಿನಿಪ್ರಿಯರಲ್ಲಿ ಸಿನಿಮಾ ಕುತೂಹಲ ಹೆಚ್ಚಿಸಿದೆ.

 

ಬೀದರ್ ಮೂಲದ ಸುದರ್ಶನ್ ಸುಂದರರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ, ಈ ಹಿಂದೆ ‘ರತ್ನ ಮಂಜರಿ’ ಹಾಗೂ ‘ಭರ್ಜರಿ ಗಂಡು’ ಸಿನಿಮಾಗಳ ಮೂಲಕ ಗಮನಸೆಳೆದ ಪ್ರಸಿದ್ಧ್ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ, ಸಾಹಸ ಮತ್ತು ಥ್ರಿಲ್ ಅಂಶಗಳನ್ನು ಮಿಶ್ರಣ ಮಾಡಿರುವ ಈ ಸಿನಿಮಾ ಪಕ್ಕಾ ಮಾಸ್ ಎಂಟರ್ಟೈನರ್ ಆಗಿರಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

 

 

 

 

 

 

ಚಿತ್ರದ ಪ್ರಮುಖ ಆಕರ್ಷಣೆಯಾಗಿ ಐದು ಭರ್ಜರಿ ಸಾಹಸ ಸನ್ನಿವೇಶಗಳು ಇರಲಿದ್ದು, ಅವು ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಲಿವೆ. ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಸಿನಿಮಾಗೆ ವಿಭಿನ್ನ ಲುಕ್ ನೀಡಿದರೆ, ವೆಂಕಿ ಯುಡಿವಿ ಅವರ ಸಂಕಲನ ಕಥೆಗೆ ವೇಗ ತುಂಬಿದೆ. ಗುಮ್ಮಿನೇನಿ ವಿಜಯ್ ಅವರ ಸಂಗೀತ ನಿರ್ದೇಶನ ಚಿತ್ರದ ಮೆರಗು ಹೆಚ್ಚಿಸಿದೆ.

 

 

 

 

 

 

 

‘ಶೇರ್’ ಸಿನಿಮಾದಲ್ಲಿ ಕಿರಣ್ ರಾಜ್ ಹಾಗೂ ಕ್ರಿಸ್ ಜೊತೆ ಸುರೇಖ, ತನೀಶಾ ಕುಪ್ಪಂಡ, ಯಶ್ ಶೆಟ್ಟಿ, ಶೋಭ್ ರಾಜ್, ಬಲ ರಾಜ್ವಾಡಿ ಮತ್ತು ವೀಣಾ ಸುಂದರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಆಕ್ಷನ್, ಎಮೋಷನ್ ಮತ್ತು ಥ್ರಿಲ್ ಮಿಶ್ರಣವಾಗಿರುವ ಈ ಸಿನಿಮಾ ಪ್ರೇಕ್ಷಕರನ್ನು ಯಾವ ಮಟ್ಟಿಗೆ ಸೆಳೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Spread the love

Copyright © 2019 PopcornKannada.com