Cinema News
ಸಾಹಸ ಕಲಾವಿದರ ಕಟ್ಟಡಕ್ಕೆ ಕಿಚ್ಚ ಸುದೀಪ್ ನೆರವು
ಕಿಚ್ಚ ಸುದೀಪ್ ಸಾಹಸ ಕಲಾವಿದರ ಕಟ್ಟಡಕ್ಕೆ 10 ಲಕ್ಷ ನೆರವು ನೀಡಿದ್ದು, ಈ ಬಗ್ಗೆ ಸಾಹಸ ನಿರ್ದೇಶಕರು ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫೈಟರ್ಸ್ ಆಸೋಸಿಯೇಶನ್ ಅಧ್ಯಕ್ಷ ಥ್ರಿಲ್ಲರ್ ಮಂಜು ಸುದೀಪ್ ಅವರ ಸಾಹಸ ಕಲಾವಿದರ ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
ನಾಯಂಡಳ್ಳಿ ಬಳಿ ಸಾಹಸ ಕಲಾವಿದರ ಸಂಘದ ಕಟ್ಟಡ ಸಿದ್ಧವಾಗುತ್ತಿದೆ. ಇದಕ್ಕೆ ಸಾಕಷ್ಟು ಸಾಹಸ ಕಲಾವಿದರು ಧನಸಹಾಯ ನೀಡಿದ್ದಾರೆ. ಸುದೀಪ್ ಅವರ ಸಹಾಯಕ್ಕೆ ನಿರ್ದೇಶಕ ರವಿವರ್ಮಾ ಸೇರಿದಂತೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ ನನ್ನಂತವನನ್ನು ಇಷ್ಟು ದೊಡ್ಡ ಹೀರೋ ಮಾಡುವಲ್ಲಿ ನಿಮ್ಮ ಶ್ರಮವೂಇದೆ. ಹಾಗಾಗಿ ನಿಮಗೂ ನನ್ನ ಕಡೆಯಿಂದ ಧನ್ಯವಾಗಳು ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಸಿಸಿಎಲ್‌ನಲ್ಲಿ ಕಪ್ ಗೆದ್ದಾಗ ಬಂದ ಅಷ್ಟೂ ಹಣವನ್ನು ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ಸುದೀಪ್ ನೀಡಿದ್ದರು. ಆಗ ಸುದೀಪ್ ಕ್ರಿಕೆಟ್ ತಂಡದ ನಾಯಕರಾಗಿದ್ದರು.