Cinema News
ಆಗಸ್ಟ್ 9 ರಂದು “ಕೆಂಪೇಗೌಡ-2” ಎಂಟ್ರಿ
ತನ್ನ ಹಾಡು ಮತ್ತು ಟ್ರೇಲರ್ ಮೂಲಕ ಈಗಾಗಲೇ ಸದ್ದು ಮಾಡಿರುವ ‘ಕೆಂಪೇಗೌಡ-2’ ಚಿತ್ರ ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ.
ಕೋಮಲ್ ಮೊದಲಬಾರಿಗೆ ಪೊಲೀಸ್ ಅವತಾರವೆತ್ತಿರುವ ಕೆಂಪೇಗೌಡ-2 ಚಿತ್ರ ಆ್ಯಕ್ಷನ್ ಸಬ್ಜೆಕ್ಟ್‌ನ್ನು ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು ಚಿತ್ರದ ಮೇಲೆ ಅತೀವ ನಿರೀಕ್ಷೆಯನ್ನು ಹೊಂದುವಂತೆ ಮಾಡಿದೆ.
ಇನ್ನೊಂದು ವಿಶೇಷ ಎಂದರೆ ಈಗಾಗಲೇ ಸಿನಿಮಾ ನೋಡಿರುವ ನಟ ಜಗ್ಗೇಶ್ ತಮ್ಮ ತಮ್ಮನ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಮೂಲಕ ನನ್ನ ತಮ್ಮ ಬೇರೆ ಯಾವುದೋ ರೇಂಜ್‌ಗೆ ಹೋಗುತ್ತಾನೆ ಎಂದು ಹೇಳಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನ ಪೈಲ್ವಾನ್ , ಕುರುಕ್ಷೇತ್ರ ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ಸುದ್ದಿಯಾಗಿತ್ತು. ಆದರೆ ಅವೆಲ್ಲವೂ ಹಿಂದಕ್ಕೆ,ಮುಂದಕ್ಕೆ ಹೋಗಿದ್ದು, ಕೋಮಲ್ ಅವರ “ಕೆಂಪೇಗೌಡ2” ಅಂದು ತೆರೆಗೆ ಬರಲಿದೆ.
ಈ ಸಿನಿಮಾದಲ್ಲಿ ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಮುಟ್ಟದ ವಿಷಯವೊಂದನ್ನು ತೋರಿಸಲಾಗಿದೆಯಂತೆ. ಇನ್ನು ನಿರ್ಮಾಪಕ ಶಂಕರೇಗೌಡ ಮೊದಲಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರೂ ಆಗುತ್ತಿದ್ದಾರೆ.