Cinema News

ಏಪ್ರಿಲ್ 30ಕ್ಕೆ ಪ್ಯಾನ್ ಇಂಡಿಯಾ ರಿಲೀಸ್‌ಗೆ ಸಜ್ಜಾದ “ಕೆಡಿ”

Published

on

ಬಿಗ್ ಬಜೆಟ್ ಹಾಗೂ ಸ್ಟಾರ್ ಕಾಸ್ಟ್‌ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ “ಕೆಡಿ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಭರ್ಜರಿಯಾಗಿ ನಡೆಯಿತು. ಅಶೋಕಾ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ನಟ ದತ್ತಣ್ಣ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ಕೆ.ವಿ.ಎನ್. ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರ ಭಾರೀ ಬಜೆಟ್‌ನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನವಿದ್ದು, ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ನಾಯಕನಾಗಿ ಅಭಿನಯಿಸಿದ್ದಾರೆ. ಕಾರ್ಯಕ್ರಮದಲ್ಲಿ ರೀಶ್ಮಾ ನಾಣಯ್ಯ, ರಮೇಶ್ ಅರವಿಂದ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವಿಲಿಯಂ ಡೇವಿಡ್ ಸೇರಿದಂತೆ ಹಲವು ಕಲಾವಿದರು ಮತ್ತು ತಾಂತ್ರಿಕರು ಹಾಜರಿದ್ದರು.

 

ನಿರ್ದೇಶಕ ಪ್ರೇಮ್ ಮಾತನಾಡುತ್ತ, “ಕೆಡಿ ಇದೇ ತಿಂಗಳ 30ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ನಿಜವಾದ ಶಕ್ತಿ ನಿರ್ಮಾಪಕರದು. ಅವರು ಮೂರು ವರ್ಷಗಳಿಂದ ಚಿತ್ರತಂಡವನ್ನು ಬೆಂಬಲಿಸಿ ಈ ಚಿತ್ರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಟ್ರೈಲರ್‌ನಲ್ಲಿ ಕಾಣಿಸುವ ಪ್ರತಿಯೊಂದು ಪಾತ್ರವೂ ಚಿತ್ರದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ” ಎಂದು ಹೇಳಿದರು.

 

 

 

 

 

 

ನಾಯಕ ದ್ರುವ ಸರ್ಜಾ ಮಾತನಾಡಿ, “ನಮ್ಮ ಚಿತ್ರೋದ್ಯಮದ ಬೆಳವಣಿಗೆಗೆ ಪ್ರೇಕ್ಷಕರ ಬೆಂಬಲವೇ ಕಾರಣ. ‘ಕೆಡಿ’ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಸ್ವಲ್ಪ ಆಕ್ಷನ್ ಅಂಶಗಳೂ ಇವೆ. ಈ ಚಿತ್ರದ ನಿಜವಾದ ಹೀರೋ ನಮ್ಮ ನಿರ್ಮಾಪಕರೇ” ಎಂದು ಹೇಳಿದರು. ನಾಯಕಿ ರೀಶ್ಮಾ ಅವರ ಅಭಿನಯ ಹಾಗೂ ಅರ್ಜುನ್ ಜನ್ಯ ಅವರ ಸಂಗೀತವನ್ನೂ ಅವರು ಶ್ಲಾಘಿಸಿದರು.

 

ನಿರ್ಮಾಪಕ ವೆಂಕಟ್ ನಾರಾಯಣ್ ಹಾಗೂ ರಮೇಶ್ ಅರವಿಂದ್ ಕೂಡ ಚಿತ್ರದ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡಿ, ಇದು ವಿಭಿನ್ನ ಕಥಾಹಂದರದ ಚಿತ್ರವೆಂದು ತಿಳಿಸಿದರು. 1970-75ರ ಕಾಲಘಟ್ಟದ ನೈಜ ಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆಯನ್ನೊಳಗೊಂಡಿರುವ ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ವಿವಿಧ ಕೊರಿಯೋಗ್ರಾಫರ್‌ಗಳು ಕೆಲಸ ಮಾಡಿದ್ದಾರೆ. ಬಾಲಿವುಡ್ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Spread the love

Copyright © 2019 PopcornKannada.com