Cinema News

ಕಮಲ್ ಶ್ರೀದೇವಿಗೆ ಚಿತ್ರಕ್ಕೆ ಕುಂಬಳಕಾಯಿ

Published

on

63ದಿನಗಳ ಚಿತ್ರೀಕರಣ ಮುಗಿಸಿ ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಶುಭಂ ಹೇಳಿದ ಕಮಲ್ ಶ್ರೀದೇವಿ

 

ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಿತ್ರತಂಡದಿಂದ ಚಾಲನೆ.

ನಾಯಕ ನಟ ಸಚಿನ್ ಚಲುವರಾಯ ಸ್ವಾಮಿ ಹಾಗೂ ಅವ್ರ ಶ್ರೀಮತಿ ಆಕಾಂಕ್ಷ ಪಟಮಕ್ಕಿ ಸಹ ನಿರ್ಮಾಪಕರಾದ ರಾಜವರ್ಧನ್ ನಿರ್ದೇಶಕರಾದ ಸುನೀಲ್ ಹಾಗೂ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಮಲ್ ಶ್ರೀದೇವಿಯ ಇಲ್ಲಿವರೆಗಿನ ಪಯಣ ಹಾಗೂ ಬಿಡುಗಡೆ ತಯಾರಿ ಕುರಿತು ವಿಶೇಷವಾಗಿ ಮಾತಾಡಿದ್ದಾರೆ.

 

 

ಕಮಲ್ ಶ್ರೀದೇವಿ ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಾಣದ Barnswallow companyಯ ರಾಜವರ್ಧನ್ ಸಹ ನಿರ್ಮಾಣದ
ಸಚಿನ್ ಚಲುವರಾಯ ಸ್ವಾಮಿ ಅಭಿನಯದ ಚಿತ್ರ.

 

 

ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

 

 

ಈಗಾಗ್ಲೇ ಟೈಟಲ್ ಜತೆ ಕ್ರಿಯೇಟೀವ್ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ ಮಾಡಿ ಸುದ್ದಿಯಾಗಿದ್ದ ಚಿತ್ರತಂಡ ಇದೀಗ ಚಿತ್ರೀಕರಣ ಮುಗಿಸಿ ನಾವು ರಿಲೀಸ್ಗೆ ರೆಡಿ ಅಂತಿದೆ. ಅದ್ರಂತೆ ಇತ್ತೀಚೆಗೆ ಶ್ರೀ ಬಂಡೆ ಮಹಕಾಳಿಯಮ್ಮನ ದೇವಸ್ಥಾನದಲ್ಲಿ ಚಿತ್ರೀಕರಣ ಯಶಸ್ವಿಯಾಗಿದೆ. ಇಲ್ಲಿಂದ ಪ್ರಚಾರ ಕಾರ್ಯ ಆರಂಭಿಸ್ತಿದ್ದೀವಿ ಅಂತ ಪೂಜೆ ಸಲ್ಲಿಸಿದ್ರು. ಜೊತೆಗೆ ಮಾತನಾಡಿದ ಚಿತ್ರತಂಡ ಎಲ್ಲವೂ ನಾವಂದುಕೊಂಡಂತೆ ಆಗಿದೆ.. ಆಗಸ್ಟ್ ಸೆಪ್ಟೆಂಬರ್ ವೇಳೆಗೆ ಪ್ರೇಕ್ಷಕರೆದುರಿಗೆ ಬರಲಿದ್ದೇವೆ.. ಇಲ್ಲಿಂದ ಒಂದೊಂದಾಗಿ ಸಿನಿಮಾದ ವಿಶೇಷತೆಗಳನ್ನ ಮಧ್ಯಮದೊಂದಿಗೆ ಹಂಚಿಕೊಂಡು ಬರಲಿದ್ದೇವೆ ಎಂದಿದ್ದಾರೆ.

 

Spread the love
Click to comment

Copyright © 2019 PopcornKannada.com