Box Office

5 ದಿನಗಳಲ್ಲಿ 105 ಕೋಟಿ ಬಾಚಿದ ಕಬೀರ್ ಸಿಂಗ್

Published

on

ತೆಲುಗಿನಲ್ಲಿ ಕಲ್ಟ್‌ ಸಿನಿಮಾ ಎಂದೇ ಹೆಸರುವಾಸಿಯಾಗಿ ದೊಡ್ಡ ಹಿಟ್‌ ಆಗಿದ್ದ ಅರ್ಜುನ್‌ ರೆಡ್ಡಿ ಈಗ ಹಿಂದಿಯಲ್ಲಿ ಕಬೀರ್‌ ಸಿಂಗ್‌ ಆಗಿ ರಿಲೀಸ್‌ ಆಗಿದ್ದು, ಕಳೆದ ವಾರ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಬಾಲಿವುಡ್‌ನ ಹಿಟ್‌ ಲೀಸ್ಟ್‌ಗಳಲ್ಲಿ ಸೇರಿಕೊಂಡಿದೆ.

 

 

ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರವನ್ನು ಇದೊಂದು ಕೆಟ್ಟ ಸಿನಿಮಾ ಎಂದು ಬಿಂಬಿತವಾಗಿತ್ತು. ಆದರೆ ಜನ ಮಾತ್ರ ಚಿತ್ರಮಂದಿರಕ್ಕೆ ಹೋಗಿ ಸಿನಿಮಾವನ್ನು ನೋಡುತ್ತಲೇ ಇದ್ದಾರೆ. ಹಾಗಾಗಿ ಚಿತ್ರ ಐದೇ ದಿನಗಳಲ್ಲಿ ನೂರು ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ಶಾಹಿದ್‌ ಕಪೂರ್‌ ಸಹ ನೂರು ಕೋಟಿ ಕ್ಲಬ್‌ ಸೇರಿದ ಹೀರೋಗಳ ಸಾಲಿಗೆ ಸೇರಿಕೊಂಡಿದ್ದಾರೆ.

 

 

ಯಾವುದೇ ಸರ್ಕಾರಿ ರಜೆ ಇಲ್ಲದೇ ಹೋದರೂ ಈ ಚಿತ್ರ ಇಷ್ಟೊಂದು ಹಣ ಗಳಿಸಿರುವುದರಿಂದ ಶಾಹಿದ್ ಕಪೂರ್‌ ಮತ್ತು ಸಂದೀಪ್‌ ವಂಗಾ ರೆಡ್ಡಿ ಫುಲ್‌ ಖುಷಿಯಾಗಿದ್ದಾರೆ. ಶಾಹಿದ್ ಕಪೂರ್ ನಟನೆಗೆ ಯುವ ಸಮೂಹ ಮಾರುಹೋಗಿದೆ. ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಆಗಲಿದೆ ಎನ್ನುತ್ತಿದ್ದಾರೆ ಬಾಲಿವುಡ್ ಪಂಡಿತರು.

 

Spread the love
Click to comment

Copyright © 2019 PopcornKannada.com