Cinema News
ಶಶಿಕುಮಾರ್ ಮಗ ಆದಿತ್ಯ ನಟನೆಯ “ಕಾದಾಡಿ” ಚಿತ್ರ ಜುಲೈ 5 ರಂದು ತೆರೆಗೆ
ಖ್ಯಾತ ನಟ ಶಶಿಕುಮಾರ್ ಮಗ ಅಕ್ಷಿತ್ ಶಶಿಕುಮಾರ್ ಅಭಿನಯದ ಮೂರನೆಯ ಚಿತ್ರ ‘ಕಾದಾಡಿ’, ಈ ಶುಕ್ರವಾರ (ಜುಲೈ 05) ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಅಕ್ಷಿತ್ ತಮ್ಮ ಹೆಸರನ್ನು ಆದಿತ್ಯ ಎಂದು ಬದಲಾಯಿಸಿಕೊಂಡಿದ್ದಾರೆ. ಅದೇ ಹೆಸರಿನಲ್ಲಿ ಇನ್ನೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ, ‘ಕಾದಾಡಿ’ ಚಿತ್ರವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಆದಿತ್ಯ ಮ್ಯೂಸಿಕ್ ಸಂಸ್ಥೆಯಡಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ಅಕ್ಷಿತ್ ಅಲಿಯಾಸ್ ಆದಿತ್ಯ, ‘ಮೂರೂವರೆ ವರ್ಷದ ಹಿಂದೆ ಪ್ರಾರಂಭವಾದ ಚಿತ್ರ. ಆಗ ನನ್ನ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಅವರು ಹೇಳಿದ ಕಥೆ ನನಗೆ ಬಹಳಷ ಇಷ್ಟವಾಯಿತು. ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಮಾಡೋಣ ಎಂದರು. ಒಪ್ಪಿದೆ. ಮುಹೂರ್ತದ ಸಂದರ್ಭದಲ್ಲಿ ಕನ್ನಡದಲ್ಲೂ ಬಿಡುಗಡೆ ಮಾಡೋಣ ಎಂದರು. ಮೂರು ಭಾಷೆಗಳಲ್ಲಿ ಬಿಡಗಡೆ ಆದರೆ ಪ್ಲಸ್ ಆಗತ್ತೆ. ಒಟ್ಟಿಗೆ ಮಾಡಿ ಎಂದೆ. ಕನ್ನಡ ನನ್ನ ಮಾತೃಭಾಷೆ, ಅಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಿ ಎಂದೆ. ಪ್ರಮೋಷನ್ ಸಾಕಾಗುತ್ತಿಲ್ಲ. ತುಂಬಾ ಪ್ರಚಾರ ಬೇಕು. ಆದಷ್ಟು ಮಾಡುತ್ತಿದದಾರೆ. ಹೈದರಾಬಾದ್‍ನಲ್ಲಿ ಡಿಜಿಟಲ್ ಪ್ರಮೋಷನ್ ಜೋರಾಗಿದೆ. ಇಲ್ಲಿ ಬೇರೆ ತರಹ. ಜನ ಬರುತ್ತಿಲ್ಲ. ಜನರನ್ನು ಕರೆದುಕೊಂಡು ಬರಬೇಕೆಂದರೆ ಪ್ರಚಾರ ಜೋರಾಗಿರಬೇಕು. ಬರೀ ಇನ್‍ಸಟಾಗ್ರಾಂ ರೀಲ್ಸ್ನಿಂದ ಏನೂ ಆಗಲ್ಲ. ಜನ ಬಂದರೆ ಇನ್ನೂ ಖುಷಿಯಾಗುತ್ತದೆ’ ಎಂದರು.
ಅಕ್ಷಿತ್ ಎಂಬ ಹೆಸರನ್ನು ಆದಿತ್ಯ ಆಗಿ ಬದಲಾಯಿಸಿಕೊಂಡಿದ್ದರ ಕುರಿತು ಮಾತನಾಡುವ ಅವರು, ‘ನ್ನ ಹೆಸರು ಆದಿತ್ಯ. ನನ್ನ ಸ್ನೇಹಿತರೆಲ್ಲಾ ಆದಿತ್ಯ ಅಂತಲೇ ಕರೆಯುತ್ತಾರೆ. ಅಕ್ಷಿತ್ ಎನ್ನುವ ಹೆಸರು ಚೆನ್ನಾಗಿದೆ, ಸಿನಿಮಾಗಾಗಿ ಬದಲಾಯಿಸಿಕೋ ಎಂದು ಯಾರೋ ಸಲಹೆ ನೀಡಿದರು. ಅದಕ್ಕಾಗಿ ಬದಲಾಯಿಸಿಕೊಂಡಿದ್ದೆ. ಆದರೆ, ಬಹಳಷ್ಟು ಜನರಿಗೆ ಹೆಸರು ಹೇಳೋಕೆ ಬರುತ್ತಿರಲಿಲ್ಲ. ಅಕ್ಷಯ್, ಅಕ್ಷತ್ ಅಂತ ಏನೇನೋ ಹೇಳುತ್ತಿದ್ದರು. ಹಾಗಾಗಿ, ನನ್ನ ಮೂಲ ಹೆಸರಿಗೆ ವಾಪಸ್ಸಾದೆ’ ಎಂದರು.
ಚಿತ್ರದಲ್ಲಿನ ಪಾತ್ರದ ಕುರಿತು ಮಾತನಾಡುವ ಅವರು, ‘ಇದೊಂದು ವಿಚಿತ್ರವಾದ ಪಾತ್ರ. ಒಳ್ಳೆಯವನಾ, ಕಟ್ಟವನಾ ಗೆಸ್ ಮಾಡೋಕೆ ಆಗಲ್ಲ. ಕನ್ನಡದಲ್ಲಿ ನಾನೇ ಡಬ್ ಮಾಡಿದ್ದದೀನಿ. ಬೇರೆ ಭಾಷೆಗಳಲ್ಲಿ ಮಾಡಿಲ್ಲ. ಕನ್ನಡದಲ್ಲಿ ಚಿತ್ರ ಮೊದಲು ಬಿಡುಗಡೆ ಆಗುತ್ತಿದೆ. ಆಗಸ್ಟ್ನಲಲಿ ಬೇರೆ ಭಾಷೆಗಳಲ್ಲಿ ಬಿಡಗುಡೆಯಾಗುತ್ತಿದೆ. ಇವತ್ತು ನಾನು, ನಿರ್ಮಾಪಕ ಮತ್ತು ವಿತರಕ ಮಾತ್ರ ಇಲ್ಲಿದ್ದೇವೆ. ಪ್ರಚಾರಕ್ಕೆ ನಾಯಕಿಯರು ಬಂದಿಲ್ಲ. ಅವರು ಶೂಟಿಂಗ್‍ನಲ್ಲಿದ್ದಾರಂತೆ. ಇದು ನನ್ನ ಸಿನಿಮಾ, ನನ್ನ ಸಿನಿಮಾಗಾಗಿ ಏನು ಬೇಕಾದರೂ ಮಾಡುತ್ತೇನೆ. ಒಳ್ಳೆಯ ಸಿನಿಮಾ ಇದು. ತುಂಬಾ ಚೆನ್ನಾಗಿ ಮಾಡಿದ್ದಾರೆ’ ಎಂದರು.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸತೀಶ್ ಮಲ್ಲಂಪಾಟಿ, ‘’ಕಾದಾಡಿ’ ಎಂದರೆ ಹೋರಾಟ. ಎಲ್ಲರೂ ಹೋರಾಟ ಮಾಡುತ್ತೇವೆ. ತೆಲುಗು ಮತ್ತು ತಮಿಳಿನಲ್ಲಿ ಬೇರೆ ಹೆಸರುಗಳಿವೆ. ಆದಿತ್ಯ ಮೂರು ಭಾಷೆಗಳಲ್ಲಿ ಆನ್‍ಸ್ಪಾಟ್ ಮಾತಾಡಿದ್ದಾರೆ. ಕನ್ನಡದಲ್ಲಿ ಮಾತ್ರ ಡಬ್ ಮಾಡಿದ್ದಾರೆ. ಇದೊಂದು ಮಾಸ್ ಚಿತ್ರ. ಒಂದೊಳ್ಳೆಯ ವಿಷಯವನ್ನು ಕಮರ್ಷಿಯಲ್ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
‘ಕಾದಾಡಿ’ ಚಿತ್ರದಲ್ಲಿ ಆದಿತ್ಯಗೆ ಲಾವಣ್ಯ ಸಾಹುಕಾರ್ ಮತ್ತು ಚಾಂದಿನಿ ತಮಿಳರಸನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪೋಸಾನಿ ಕೃಷ್ಣಮುರಳಿ, ರವಿ ಕಾಳೆ, ಮಾರಿಮುತ್ತು, ಪ್ರೇಮ್ ಮನೋಹರ್, ಶ್ರವಣ್ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಭೀಮ್ಸ್ ಸಿಸಿರಿಲಿಯೋ ಸಂಗೀತ ಮತ್ತು ಡಿ. ಯೋಗಿಪ್ರಸಾದ್ ಛಾಯಾಗ್ರಹಣ ಈ ಚಿತ್ರಕ್ಕಿದೆ