News

5 ಭಾಷೆಯಲ್ಲಿ ಬರ್ತಿದೆ ಜಂಗಲ್ ಬೂಗಿ ರಿಯಾಲಿಟಿ ಶೋ..60 ದಿನ ಕಾಡಿನಲ್ಲಿ ಪಯಣ..ಗೆದ್ರೆ ಸಿಗುತ್ತೇ 80 ಲಕ್ಷ ಹಣ

Published

on

ಜಂಗಲ್ ಬೂಗಿ..ಇದು ಹೊಸ ರಿಯಾಲಿಟಿ ಶೋ..ಟೈಟಲ್ ಹೇಳುವಂತೆ ಕಾಡಿನಲ್ಲಿ ನಡೆಯುವ ಶೋ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕು.

 

ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ.

 

 

 

 

 

ಎಲ್ಲಿ ಯಾವಾಗ ಶೋ ಪ್ರಸಾರ?

ಜಂಗಲ್ ಬೂಗಿ ರಿಯಾಲಿಟಿ ಶೋನ್ನ zeeಕನ್ನಡ ಪ್ರಸಾರ ಮಾಡಲಿದೆ. ಇದೇ ತಿಂಗಳ 15ರಿಂದ ಆಡಿಷನ್ ಶುರುವಾಗಲಿದ್ದು, ಮೇ ಕೊನೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಜೂನ್ 10 ರಿಂದ zeeನಲ್ಲಿ ಶೋ ಪ್ರಸಾರವಾಗಲಿದೆ.

 

ಯಾರು ಭಾಗಿಯಾಗಬಹುದು?

ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಸಾಮಾನ್ಯರು ಭಾಗಿಯಾಗುವ ಅವಕಾಶವಿದೆ. ಆದರೆ ವಯಸ್ಸು 18 ರಿಂದ 28 ಮೀರಬಾರದು. ಜಂಗಲ್ ಬೂಗಿ ಶೋ ಗೆದ್ದವರಿಗೆ 80 ಲಕ್ಷ ಹಣ ಸಿಗಲಿದೆ.

 

ಮೆಂಟರ್ ಯಾರು ಯಾರು?

ಜಂಗಲ್ ಬೂಗಿಯ 5 ತಂಡಗಳಲ್ಲಿ ಕನ್ನಡ ಪ್ಯಾಂಥರ್ಸ್ ತಂಡಕ್ಕೆ ಕನ್ನಡದ ಖ್ಯಾತ ನಾಯಕ ರಮೇಶ್ ಅರವಿಂದ್ ರವರು ಮೆಂಟರ್ ಆಗಿರುತ್ತಾರೆ.

ತೆಲುಗು ಲಯನ್ಸ್ ಗೆ ತೆಲುಗಿನ ಖ್ಯಾತ ನಾಯಕ ನಟರಾದಂಥ ಮೇಕಾ ಶ್ರೀಕಾಂತ್ ಅವರು ಮೆಂಟರ್ ಆಗಿರುತ್ತಾರೆ

ತಮಿಳು ಟೈಗರ್ಸ್ ಗೆ ತಮಿಳಿನ ಖ್ಯಾತ ನಟ, ನಿರ್ಮಾಪಕ , ನಿರ್ದೇಶಕ ಅರ್ಜುನ್ ಸರ್ಜಾ ಅವರು ಮೆಂಟರ್ ಆಗಿರುತ್ತಾರೆ.

ಹಿಂದಿ ಹಾಕ್ಸ್ ಗೆ ಹಿಂದಿಯಾ ಖ್ಯಾತ ನಟ , ನಿರ್ಮಾಪಕ, ಮಾಡೆಲ್ , ಹಾಗೂ ಸಮಾಜ ಸೇವಕರಾದ ಸೋನು ಸೂದ್ ಅವರು ಮೆಂಟರ್ ಆಗಿರುತ್ತಾರೆ

ಮಳಯಾಳಂ ಮೇವರಿಕ್ಸ್ ಗೆ ಮಳಯಾಳಂನ ಖ್ಯಾತ ನಟ, ಗಾಯಕ , ನಿರ್ಮಾಪಕರಾಗಿರುವಾ ದುಲ್ಕರ್ ಸಲ್ಮಾನ್ ಅವರು ಮೆಂಟರ್ ಆಗಿರುತ್ತಾರೆ

ನಿಮಗೂ ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇದ್ರೆ ಈ ಕೆಳಕಂಡ Email ID ಹಾಗೂ Number ಗೆ ಸಂಪರ್ಕಿಸಿ

Jungleboogie931@gmail.com
9844500081

 

 

 

 

 

ಕ್ಯಾಚ್ & ವಾಚ್ ಒಟಿಟಿ ಅನಾವರಣ

EIPK ಪ್ರೊಡಕ್ಷನ್ ಹೌಸ್ ನಡಿ VKZ ಎಂಟರ್ಟೈನ್ಮೆಂಟ್ ವತಿಯಿಂದ ವಿನೋದ್ ಪಾರ್ಥ ಸಾರಥಿ ಹೊಸ ರಿಯಾಲಿಟಿ ಶೋ ಶುರು‌ ಮಾಡುವುದರ ಜೊತೆಗೆ ಹೊಸದೊಂದು ಒಟಿಟಿ ಫ್ಲಾಟ್ ಫಾರ್ಮ್ ಆರಂಭಿಸಿದ್ದಾರೆ. ಅದಕ್ಕೆ ಕ್ಯಾಚ್ ಅಂಡ್ ವಾಚ್ ಎಂದು ಹೆಸರಿಡಲಾಗಿದ್ದು, ಆಗಸ್ಟ್ ನಿಂದ ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಾಗಲಿದೆ. ಕನ್ನಡ, ತೆಲುಗು, ತಮಿಳು , ಹಿಂದಿ ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಈ ಒಟಿಟಿಯಲ್ಲಿ ನೋಡಲು ಲಭ್ಯ ಇರಲಿವೆ.

Spread the love
Click to comment

Copyright © 2019 PopcornKannada.com