Cinema News

ಈವಾರ ತೆರೆಗೆ ಜಂಬೂ ಸರ್ಕಸ್.. ಸ್ನೇಹ ಪ್ರೀತಿಯ ಸುತ್ತ ಕಾಮಿಡಿ ಕಥಾನಕ..

Published

on

ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ‘ಜಂಬೂಸರ್ಕಸ್’ ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತನ್ನ ಹಾಡುಗಳು ಹಾಗೂ ಟ್ರೈಲರ್ ಮೂಲಕ ಸಿನಿರಸಿಕರ ಮನ ಗೆದ್ದಿರುವ ಈ ಚಿತ್ರ ಇದೇ ಶುಕ್ರವಾರ (ಸೆ.12)ರಾಜ್ಯಾದ್ಯಂತ ತೆರೆಕಾಣಲಿದೆ‌.

 

 

 

ಬುಲ್ ಬುಲ್, ಕೃಷ್ಣ, ಚೆಲ್ಲಾಟ, ಪೊರ್ಕಿ, ಒಡೆಯ ಸೇರಿದಂತೆ ಸ್ಟಾರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸುತ್ತ ಬಂದಿರುವ ಎಂಡಿ.ಶ್ರೀಧರ್ ಅವರು ಒಡೆಯ ನಂತರ ಗ್ಯಾಪ್ ತಗೊಂಡು ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು. ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಸಿ.ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟ ಪ್ರವೀಣ್ ತೇಜ್, ಅಂಜಲಿ ಎಸ್.ಅನೀಶ್ ಯುವ ಜೋಡಿಯಾಗಿದ್ದು, ಉಳಿದಂತೆ ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್, ಸ್ವಾತಿ, ಲಕ್ಷ್ಮೀ ಸಿದ್ದಯ್ಯ ಹೀಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡ ಕಲಾವಿದರ ಬಳಗವೇ ಚಿತ್ರದಲ್ಲಿದೆ.

 

 

 

ನಿರ್ದೇಶಕ ಶ್ರೀಧರ್ ಮಾತನಾಡುತ್ತ ‘ಜಂಬೂ ಸರ್ಕಸ್’ ಒಂದು ಫ್ಯಾಮಿಲಿ ಎಂಟರ್ಟೈನರ್ ಚಿತ್ರ. ಇಲ್ಲಿ ನಾಯಕ, ನಾಯಕಿ ಅಂತೇನಿಲ್ಲ. ಚಿತ್ರದ ಪ್ರತಿ ಪಾತ್ರಗಳೂ ಲೀಡ್ ಆಗಿದ್ದು ಕಥೆಯನ್ನು ಹೇಳುತ್ತ ಹೋಗುತ್ತವೆ. ಈಗಾಗಲೇ ಹಾಡುಗಳು ಸಂಗೀತ ಪ್ರಿಯರನ್ನು ರಂಜಿಸಿದ್ದು ನಿನ್ನೆಯಷ್ಟೇ ಮತ್ತೊಂದು ಹಾಡನ್ನು ರಿಲೀಸ್ ಮಾಡಲಾಗಿದೆ. ನಿರ್ಮಾಪಕ ಹೆಚ್.ಸಿ ಸುರೇಶ್ ಅವರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿದ ಗೆಳೆಯರಿಬ್ಬರು ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆಯಾಗುತ್ತಾರೆ. ಒಂದೇ ಏರಿಯಾದಲ್ಲಿ ಎದಿರು ಬದಿರು ಮನೆ ಮಾಡುವ ಅವರಿಗೆ ಒಂದೇ ದಿನವೇ ಮಕ್ಕಳಾಗುತ್ತವೆ. ಇವರ ಗೆಳೆತನ ಇಷ್ಟವಿದರ ಪತ್ನಿಯರು ತಮ್ಮ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ದಾಯಾದಿಗಳಂತೆ ಬೆಳೆದ ಹುಡುಗ- ಹುಡುಗಿ ಮುಂದೆ ಏನೆಲ್ಲಾ ಮಾಡುತ್ತಾರೆ, ಅವರಿಬ್ಬರ ನಡುವೆ ಏನೇನು ನಡೆಯುತ್ತದೆ ಎಂಬುದೇ ಚಿತ್ರದ ಕಾನ್ಸೆಪ್ಟ್. ಇದರಲ್ಲಿ ಮೂರು ಫೈಟ್, 4 ಸಾಂಗ್‌ ಇವೆ ಎಂದು ಹೇಳಿದರು.

 

 

 

ಜಂಬೂ ಸರ್ಕಸ್ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕೃಷ್ಣ ಕುಮಾರ್ (ಕೆ.ಕೆ), ಸಂಭಾಷಣೆಗಾರರಾಗಿ ರಘು ನೀಡುವಳ್ಳಿ, ಸಂಕಲನಕಾರರಾಗಿ ಜ್ಞಾನೇಶ್, ಸುಪ್ರೀತ ಶೆಟ್ಟಿ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ, ಡಾ. ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

 

 

 

Spread the love
Click to comment

Copyright © 2019 PopcornKannada.com