Cinema News

ಜಾತರೆ ನಿರ್ಮಾಪಕರಿಂದ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಶುಭಾಶಯ

Published

on

 

ನಟ ಪ್ರಜ್ವಲ್ ದೇವರಾಜ್ ಅವರಿಗೆ ಮಂಗಳವಾರ ಹುಟ್ಟುಹಬ್ಬದ ಸಂಭ್ರಮ, ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ತಮ್ನ ನೆಚ್ಚಿನ ಸ್ಟಾರ್ ನಟನ ಬರ್ತ್ ಡೇಗೆ ಶುಭಾಶಯ ಕೋರಿದ್ದಾರೆ. ಅದೇ ರೀತಿ‌ ಪ್ರಜ್ವಲ್ ನಾಯಕನಾಗಿ ಅಭಿನಯಿಸುತ್ತಿರುವ, ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಜಾತರೆ’ಯ ನಿರ್ಮಾಪಕ ಗೋವರ್ಧನ್ ರೆಡ್ಡಿ ಹಾಗೂ ನಿರ್ದೇಶಕ ನಿರ್ದೇಶಕ ನಂದನವನಂ ಅವರು ಪ್ರಜ್ವಲ್ ಮನೆಗೆ ತೆರಳಿ ಹೂಗುಚ್ಛ ನೀಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆಕೋರಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ಕಾಣಿಸಿಕೊಂಡಿರದ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಟೈಟಲ್ ಲಾಂಚ್ ಮಾಡಲಾಗಿತ್ತು. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದೆ.

Spread the love

Copyright © 2019 PopcornKannada.com