Cinema News
ಜನವರಿಯಲ್ಲಿ ಜೇಮ್ಸ್ ಅವತಾರ ತಾಳಲಿರುವ ಅಪ್ಪು
ಭರಾಟೆ ಯಶಸ್ಸಿನಲ್ಲಿರುವ ನಿರ್ದೇಶಕ ಚೇತನ್ ಮತ್ತು ಪುನೀತ್‌ರಾಜ್‌ಕುಮಾರ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ.
ಶೂಟಿಂಗ್ ಆರಂಭಕ್ಕೂ ಮುನ್ನವೇ ಚಿತ್ರದ ಮೇಲೆ ಕ್ರೇಜ್ ಹುಟ್ಟಿಕೊಂಡಿದ್ದು, ಬಿಡುಗಡೆಯಾಗಿದ್ದ ಒಂದೇ ಒಂದು ಮೋಶನ್ ಪೋಸ್ಟರ್ ಯೂ ಟ್ಯೂಬ್‌ನಲ್ಲಿ ಹಂಗಾಮ ಸೃಷ್ಟಿ ಮಾಡಿತ್ತು. ಈ ಸಿನಿಮಾವನ್ನು ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ.
ಪುನೀತ್ ಸದ್ಯ ಯುವರತ್ನದಲ್ಲಿ ಬಿಝಿಯಾಗಿದ್ದು, ಚೇತನ್ ಇಷ್ಟು ದಿನ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದರು. ಭರಾಟೆ ರಿಲೀಸ್ ಆಗಿ ಎಲ್ಲಡೆಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚೇತನ್ ಜೇಮ್ಸ್ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿದ್ದಾರೆ. ಎಲ್ಲವನ್ನು ಮುಗಿಸಿಕೊಂಡು ಸದ್ಯದಲ್ಲೆ ಮುಹೂರ್ತವನ್ನು ನಡೆಸಿ ಶೂಟಿಂಗ್ ಗೆ ಹೋಗಲಿದ್ದಾರೆ.